ಇಂದಿನ ಆಹಾರ ಪದ್ಧತಿ, ಒತ್ತಡ ಮತ್ತು ಕೆಲವು ಜೀವನ ಶೈಲಿಯ ಪ್ರಭಾವದಿಂದ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಸಂಪೂರ್ಣ ದಿನವನ್ನೇ ಹಾಳುಮಾಡಬಹುದು. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಇದಕ್ಕೆ ಮುಖ್ಯ ಕಾರಣ ಆಧುನಿಕ ಆಹಾರ ಶೈಲಿ.
ಯಾವೆಲ್ಲಾ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರಲಿದೆ ಬನ್ನಿ ತಿಳಿಯೋಣ
ಅಪೌಷ್ಟಿಕ ಆಹಾರ ಸೇವನೆ
ಹೆಚ್ಚು ಮಸಾಲೆ, ಎಣ್ಣೆ, ಕರಿದ ಆಹಾರ, ಜಂಕ್ ಫುಡ್ ಸೇವನೆ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಗೆ ದೊಡ್ಡ ಕಾರಣ. ಇತ್ತೀಚಿನ ದಿನಗಳಲ್ಲಿ ಆಧುನಿಕ ಆಹಾರ ಶೈಲಿಗೆ ಜನ ಮಾರು ಹೋಗಿ ಈ ರೀತಿಯ ಆಹಾರ ಸೇವೆನೆ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಅತಿಯಾಗಿ ತಿನ್ನುವುದು
ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಗ್ಯಾಸ್ಟ್ರಿಕ್ ಉಂಟುಮಾಡಬಹುದು. ತನ್ನ ಹೊಟ್ಟೆಗೆ ಎಷ್ಟು ಬೇಕೋ ಅಷ್ಟೇ ತಿಂದರೆ ಜೀರ್ಣತೆಗೆ ಸುಲಭವಾಗಿ ಹೊಟ್ಟೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಆದ್ದರಿಂದ ಅತಿಯಾಗಿ ತಿನ್ನೋದರ ಬಗ್ಗೆ ಎಚ್ಚರ ವಹಿಸಬೇಕು.
ತಿನ್ನುವ ಕ್ರಮದ ಅಸಮರ್ಪಕತೆ
ಹೆಚ್ಚು ವೇಗವಾಗಿ ತಿನ್ನುವುದು ಅಥವಾ ಸರಿಯಾಗಿ ಚವಚದೆ ಊಟ ಮಾಡುವುದು. ವೇಗವಾಗಿ ತಿನ್ನುವುದರಿಂದ ಆಹಾರ ಬಾಯಿಯಲ್ಲಿ ಸರಿಯಾಗಿ ಜಗಿಯದೇ ಇರುವುದರಿಂದ ಹೊಟ್ಟೆಯೊಳಗೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುತ್ತದೆ.
ಹೆಚ್ಚಿನ ತಣ್ಣೀರಿನ ಸೇವನೆ ತಿಂಡಿ ಸಮಯದಲ್ಲಿ
ಊಟದ ಸಮಯದಲ್ಲಿ ಹೆಚ್ಚಿನ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಕೆಲವರು ಊಟದ ಮಧ್ಯೆ ನೀರು ಕುಡಿಯುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಊಟದ ಸಮಯದಲ್ಲಿ ಹೆಚ್ಚು ನೀರು ಕುಡಿದರೆ ಜೀರ್ಣ ಕ್ರಿಯೆ ನಿಧಾನ ರೀತಿಯಲ್ಲಿ ನಡೆದು, ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗುತ್ತದೆ. ಊಟದ 1 ಗಂಟೆ ಮೊದಲು ಅಥವಾ 1 ಗಂಟೆ ನಂತರ ನೀರು ಕುಡಿಯೋದು ತುಂಬಾ ಉತ್ತಮ.
ಅಮ್ಲೀಯ ಆಹಾರ ಸೇವನೆ
ಬೆಳ್ಳುಳ್ಳಿ, ಕಾಫಿ, ಚಹಾ, ಸಾಸಿವೆ, ಟೊಮ್ಯಾಟೋ, ಸೋಡಾ ಇತ್ಯಾದಿ ಅತೀವ ಸೇವನೆ ಕೂಡ ಒಳ್ಳೆಯದಲ್ಲ. ಚಹಾ ಮತ್ತು ಕಾಫಿ ಅತಿಯಾಗಿ ಸೇವಿಸಿದರೆ ಅಸಿಡಿಟಿ ಉತ್ಪತ್ತಿಯಾಗಿ, ತುಂಬಾ ಸಮಸ್ಯೆ ಎದುರಿಸಬೇಕಾಗುವುದು. ಆದ್ದರಿಂದ ಈ ಎಲ್ಲಾ ಪದಾರ್ಥಗಳ ಸೇವನೆ ಕಡಿಮೆ ಮಾಡಿದರೆ ತುಂಬಾ ಒಳ್ಳೆಯದು.
ಹೆಚ್ಚಿನ ಮದ್ಯಪಾನ ಮತ್ತು ಧೂಮಪಾನ
ಮದ್ಯಪಾನ ಮತ್ತು ಧೂಮಪಾನದಿಂದ ಹೊಟ್ಟೆಯ ಆಮ್ಲ ಪ್ರಮಾಣ ಹೆಚ್ಚಾಗಿ ಗ್ಯಾಸ್ಟ್ರಿಕ್ ಆಗಬಹುದು. ಮದ್ಯಪಾನ ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸಿ, ಹೊಟ್ಟೆಯಲ್ಲಿ ಅಸಿಡಿಟಿ ಸಮಸ್ಯೆಯನ್ನು ತರಿಸುತ್ತದೆ. ಮದ್ಯಪಾನ ಮಾಡುವಾಗ ತಿನ್ನುವ ಪದಾರ್ಥಗಳಲ್ಲಿ ನಿಯಂತ್ರಣ ಇಲ್ಲದೆ, ಗ್ಯಾಸ್ಟ್ರಿಕ್ ಸಮಸ್ಯೆಗೆ ಬಲವಾದ ಕಾರಣವಾಗುತ್ತದೆ.
ಉಪವಾಸ ಅಥವಾ ಊಟ ವಿಳಂಬ
ಇತ್ತೀಚಿನ ಕೆಲಸದ ಒತ್ತಡ ಅಥವಾ ಇನ್ನಿತರ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಿದೆ ಇರುವುದು ಕೂಡ ಬಹಳಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ಊಟ ಸಮಯಕ್ಕೆ ಸರಿಯಾಗಿ ಅನುಸರಿಸದಿದ್ದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಆದ್ದರಿಂದ ಹೊಟ್ಟೆಯನ್ನು ಹೆಚ್ಚು ಸಮಯ ಖಾಲಿ ಇಡಬಾರದು.
ನಿದ್ದೆಯ ಕೊರತೆ
ಸರಿಯಾದ ವಿಶ್ರಾಂತಿ ಇಲ್ಲದಿದ್ದರೆ ಜೀರ್ಣಕ್ರಿಯೆ ದುರ್ಬಲಗೊಳ್ಳಬಹುದು. ಮನುಷ್ಯನಿಗೆ ಸರಿಯಾದ ನಿದ್ರೆ ತುಂಬಾ ಅತ್ಯಗತ್ಯ. ದಿನಕ್ಕೆ 7 ರಿಂದ 8 ಗಂಟೆಗಳ ನಿದ್ರೆ ಆವಶ್ಯಕತೆ ಇದೆ. ಸರಿಯಾಗಿ ನಿದ್ರೆ ಅಥವಾ ವಿಶ್ರಾಂತಿ ದೇಹಕ್ಕೆ ಸಿಗದೇ ಇದ್ದರೆ ಜೀರ್ಣಕ್ರಿಯೆಗೆ ಪರಿಣಾಮವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.
ಖಾರದ ಆಹಾರ ಸೇವನೆ
ಕೆಲವು ಆಹಾರ ಪದಾರ್ಥಗಳು ಹೊಟ್ಟೆಯಲ್ಲಿ ಅನಗತ್ಯ ಗ್ಯಾಸ್ಟ್ರಿಕ್ ಉತ್ಪತ್ತಿಗೆ ಕಾರಣವಾಗಬಹುದು. ಖಾರದ ಆಹಾರ ಹೊಟ್ಟೆಯೊಳಗೆ ಬಹಳಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ಗ್ಯಾಸ್ಟ್ರಿಕ್ ಮಾತ್ರವಲ್ಲದೆ ಚರ್ಮಕ್ಕೆ ಕೂಡ ಹೆಚ್ಚು ಖಾರದ ಆಹಾರ ಒಳ್ಳೆಯದಲ್ಲ.
ತಣ್ಣಗಿನ ಆಹಾರ ಮತ್ತು ಕುಡಿಯುವ ವಸ್ತುಗಳು
ಸೋಡಾ, ಎರೆಳಿದ(ಫ್ರೈಡ್) ಆಹಾರ, ಫ್ರಿಡ್ಜ್‌ನ ತಣ್ಣಗಿನ ವಸ್ತುಗಳು ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತದೆ. ಸೋಡಾ ಅಥವಾ ಯಾವುದೇ ಅನಿಲ ತುಂಬಿದ ಬಾಟಲ್ ಪಾನೀಯ ಉತ್ತಮವಲ್ಲ. ಫ್ರಿಡ್ಜ್ ನಲ್ಲಿ ತಣ್ಣಗಾಗಿಸಿದ ಆಹಾರ ನೇರ ಸೇವನೆ ಮಾಡುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗಿ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗೆ ಕಾರಣವಾಗುತ್ತದೆ.
ನಿತ್ಯ ವ್ಯಾಯಾಮದ ಕೊರತೆ
ಸರಿಯಾದ ಚಲನಶೀಲತೆ ಇಲ್ಲದಿದ್ದರೆ ಹೊಟ್ಟೆ ಗ್ಯಾಸ್ಟ್ರಿಕ್ ಹೆಚ್ಚಾಗಬಹುದು. ದೇಹವನ್ನು ಸ್ವಲ್ಪ ವ್ಯಾಯಾಮದ ಅಥವಾ ಇನ್ನಿತರ ಚಟುವಟಿಕೆಗಳ ಮೂಲಕ ದಂಡಿಸುವುದರಿಂದ ಜೀರ್ಣ ಕ್ರಿಯೆಯನ್ನು ವೇಗವಾಗಿಸಿದರೆ, ಯಾವುದೇ ರೀತಿಯ ಅಜೀರ್ಣವಾಗಿದೆ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ.
ಆತಂಕ ಮತ್ತು ಮಾನಸಿಕ ಒತ್ತಡ
ಹೆಚ್ಚಿನ ಮಾನಸಿಕ ಒತ್ತಡವು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಯಾವುದೇ ರೀತಿಯ ಮಾನಸಿಕ ಒತ್ತಡ ದೇಹದ ಸಂಪೂರ್ಣ ವ್ಯವಸ್ಥೆಯನ್ನು ಬದಲಾಯಿಸುತ್ತದೆ ಇದರಿಂದ ಗ್ಯಾಸ್ಟ್ರಿಕ್ ಮತ್ತು ಇನ್ನಿತರ ಖಾಯಿಲೆಗಳು ಬರಲು ಸಾಧ್ಯವಿದೆ.
ಒಂದೇ ಏಟಿಗೆ ಹೆಚ್ಚು ನೀರು ಕುಡಿಯುವುದು
ಬಾಯಾರಿಕೆಯಾದಾಗ ನೀರು ಸಿಕ್ಕಿದ ಕೂಡಲೇ ರಭಸದಲ್ಲಿ ಕುಡಿದರೆ ಹೊಟ್ಟೆ ಉಬ್ಬಿ, ಜೀರ್ಣ ಕ್ರಿಯೆಯಲ್ಲಿ ಅಸಮತೋಲನವಾಗುತ್ತದೆ. ಆದ್ದರಿಂದ ನೀರು ಕುಡಿವಾಗ ನಿಧಾನವಾಗಿ ಮತ್ತು ಗುಟುಕಾಗಿ ಕುಡಿಯಬೇಕು.
ಈ ಕಾರಣಗಳನ್ನು ತಪ್ಪಿಸಿ ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿಯಂತ್ರಿಸಬಹುದು.