ಮಕರ ಸಂಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲಾ ಬಾಂಧವರಿಗೆ ಶುಭಾಶಯ ಕೊರಿದ್ದಾರೆ. ಸಾಮಾಜಿಕ ಮಾದ್ಯಮದಲ್ಲಿ ಪೋಸ್ಟ್ ಹಾಕುವ ಮೂಲಕ ಸಂಕ್ರಾಂತಿ ವಿಶೇಷತೆ ಮತ್ತು ಹಬ್ಬದ ಮಹತ್ವದ ಬಗ್ಗೆ ಹಂಚಿಕೊಂಡಿದ್ದಾರೆ.
ಮಕರ ಸಂಕ್ರಾಂತಿ ಎಂದರೆ ಎಳ್ಳು ಮತ್ತು ಬೆಲ್ಲದ ಮಾಧುರ್ಯದಿಂದ ತುಂಬಿರುವ ಹಬ್ಬ ಮತ್ತು ಪವಿತ್ರ ಹಬ್ಬ ಎಂದು ಬರೆದು ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಶುಭಾಶಯ ತಿಳಿಸಿದರು. ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಕ್ರಾಂತಿ ಹಬ್ಬದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮಹತ್ವದ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ಪ್ರಧಾನಿ ಮೋದಿಯವರು “ ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯ ಪದ್ಧತಿಗಳ ಪ್ರಕಾರ ಈ ಶುಭ ಸಂದರ್ಭವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಸಂತೋಷ, ಅದೃಷ್ಟ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಸೂರ್ಯ ದೇವರನ್ನು ಪ್ರಾರ್ಥಿಸುತ್ತೇನೆ. ಸೂರ್ಯೋ ದೇವೋ ದಿವಾನ್ ಗಚ್ಛೇತ್ ಮಕರಸ್ಥೋ ರವಿಃ ಪ್ರಭು. ಉತ್ತರಾಯಣೇ ಮಹಾಪುಣ್ಯ ಸರ್ವಪಾಪಪ್ರಣಾಶನಮ್” ಎಂದು ಬರೆದಿದ್ದಾರೆ.
ಈ ಮೂಲಕ ಪ್ರಧಾನಿ ಮೋದಿ ಭಗವಾನ್ ಸೂರ್ಯ ಎಲ್ಲರನ್ನೂ ಆಶೀರ್ವದಿಸಲಿ ಮತ್ತು ಮೇಲಕ್ಕೆತ್ತಲಿ ಎಂದು ಪ್ರಾರ್ಥಿಸಿದ್ದಾರೆ. ಎಳ್ಳು ಮತ್ತು ಬೆಲ್ಲದ ಸಿಹಿಯೊಂದಿಗೆ ಆಚರಿಸಲಾಗುವ ಮಕರ ಸಂಕ್ರಾಂತಿ ಹಬ್ಬ ಎಲ್ಲರಿಗೂ ಸಂತೋಷ, ಅದೃಷ್ಟ ಮತ್ತು ಉತ್ತಮ ಆರೋಗ್ಯ ತರಲಿ ಎಂದು ಪ್ರಧಾನಿ ಸೂರ್ಯ ದೇವರಲ್ಲಿ ಬೇಡಿಕೊಂಡರು.





