06 March 2026 | Join group

ಯುಎಇಯಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸಂದೇಶ

  • 05 Mar 2026 06:16:04 PM

ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಬುಧಾಬಿಯಲ್ಲಿರುವ Embassy of India, Abu Dhabi ಭಾರತೀಯರಿಗೆ ಹೊಸ ಸಲಹಾ ಸೂಚನೆ ಹೊರಡಿಸಿದೆ.

 

ಯುಎಇಯಲ್ಲಿ ಇರುವ ಎಲ್ಲಾ ಭಾರತೀಯರು ಶಾಂತವಾಗಿದ್ದು, ಎಚ್ಚರಿಕೆಯಿಂದ ಇರಬೇಕು ಹಾಗೂ ಯುಎಇ ಅಧಿಕಾರಿಗಳು ನೀಡುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ. ಜೊತೆಗೆ ಸಮಯಾವಕಾಶಕ್ಕೆ ಹೊರಬರುವ ಅಧಿಕೃತ ಸೂಚನೆಗಳನ್ನು ಗಮನಿಸುವಂತೆ ಕೂಡ ಮನವಿ ಮಾಡಿದೆ.

 

ಯಾವುದೇ ಪ್ರಶ್ನೆ ಅಥವಾ ತುರ್ತು ಸಮಸ್ಯೆಗಳಿದ್ದರೆ ಭಾರತೀಯರು 24x7 ಸಹಾಯವಾಣಿ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

 

ಸಂಪರ್ಕ ವಿವರಗಳು:

ಟೋಲ್ ಫ್ರೀ: 800-46342

ವಾಟ್ಸಾಪ್: +971 543090571

ಇಮೇಲ್: pbsk.dubai@mea.gov.in, ca.abudhabi@mea.gov.in