17 March 2026
sudhavanikannada@gmail.com

ಡ್ರೋನ್ ಘಟನೆ ಹಿನ್ನೆಲೆ: ದುಬೈ ಏರ್‌ಪೋರ್ಟ್ ಬಳಿ ಹಲವು ರಸ್ತೆ ಮುಚ್ಚಿದ ಅಧಿಕಾರಿಗಳು

  • 16 Mar 2026 12:42:03 PM

ಸೋಮವಾರ ಬೆಳಗ್ಗೆ ನಡೆದ ಡ್ರೋನ್ ಸಂಬಂಧಿತ ಘಟನೆಯ ಹಿನ್ನೆಲೆಯಲ್ಲಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹಲವಾರು ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ದುಬೈ ಪೊಲೀಸರ ಅಧಿಕೃತ ಸಾಮಾಜಿಕ ಜಾಲತಾಣದ ಪ್ರಕಾರ, ಏರ್‌ಪೋರ್ಟ್ ರಸ್ತೆ ಹಾಗೂ ಏರ್‌ಪೋರ್ಟ್ ಟನಲ್ ಅನ್ನು ಮುಚ್ಚಲಾಗಿದೆ. ಅದೇ ರೀತಿ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಕಾರ್ಗೋ ವಿಲೇಜ್ ಹಾಗೂ ಅಲ್ ಗರ್ಹೌದ್ ಸೇತುವೆಯನ್ನೂ ತಾತ್ಕಾಲಿಕವಾಗಿ ಕೂಡ ಮುಚ್ಚಲಾಗಿದೆ.

 

ವಾಹನಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

 

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ಡ್ರೋನ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ ಎಂದು ತಿಳಿಸಲಾಗಿದೆ.