ದುಬೈ: ಈದ್ ಅಲ್ ಫಿತರ್ ಹಬ್ಬದ ಹಿನ್ನೆಲೆಯಲ್ಲಿ ದುಬೈನಲ್ಲಿ ವಾಹನ ಚಾಲಕರಿಗೆ ಪ್ರತಿ ವರ್ಷದಂತೆ ಇ ವರ್ಷವೂ ಉಚಿತ ಪಾರ್ಕಿಂಗ್ ಬಗ್ಗೆ ತಿಳಿಸಲಾಗಿದೆ. Dubai Roads and Transport Authority (RTA) ಈದ್ ಹಬ್ಬದ ಅವಧಿಯಲ್ಲಿ ಸಾರ್ವಜನಿಕ ಪಾರ್ಕಿಂಗ್ ಉಚಿತವಾಗಿರುತ್ತದೆ ಎಂದು ಘೋಷಿಸಿದೆ.
RTA ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಮಾರ್ಚ್ 19, 2026 ಗುರುವಾರದಿಂದ ಮಾರ್ಚ್ 21ರವರೆಗೆ ದುಬೈ ನಗರದಲ್ಲಿನ ಎಲ್ಲಾ ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ವಸೂಲಿ ಇರುವುದಿಲ್ಲ.
ಆದರೆ ಬಹುಮಹಡಿ (multi-storey) ಪಾರ್ಕಿಂಗ್ ಸೌಲಭ್ಯಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈದ್ ಹಬ್ಬದ ಮೊದಲ ದಿನದಿಂದ ಮೂರನೇ ದಿನದವರೆಗೆ ಉಚಿತ ಪಾರ್ಕಿಂಗ್ ಸೌಲಭ್ಯ ಇರಲಿದೆ. ಬಳಿಕ ಈದ್‌ನ ನಾಲ್ಕನೇ ದಿನದಿಂದ ಸಾಮಾನ್ಯ ಪಾರ್ಕಿಂಗ್ ಶುಲ್ಕಗಳು ಮತ್ತೆ ಜಾರಿಗೆ ಬರುತ್ತವೆ ಎಂದು RTA ತಿಳಿಸಿದೆ.
ಈದ್ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ದುಬೈ ಮೆಟ್ರೋ, ಟ್ರಾಮ್ ಹಾಗೂ ಇತರೆ ಸಾರ್ವಜನಿಕ ಸಾರಿಗೆ ಸೇವೆಗಳ ವೇಳಾಪಟ್ಟಿಯಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




