ದೆಹಲಿ: ಜಾಗತಿಕ ಇಂಧನ ಸಂಕಷ್ಟದ ನಡುವೆ, ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ AQUA TITAN, ಈಗ ದಿಕ್ಕು ಬದಲಿಸಿ ಮಾರ್ಚ್ 21ರಂದು ಮಂಗಳೂರು ಬಂದರಿಗೆ ತಲುಪಲಿದೆ.
ಮಂಗಳೂರು ರಿಫೈನರಿ (MRPL) ಈ ಸಾಗಣೆಯನ್ನು ಚಾರ್ಟರ್ ಮಾಡಿಕೊಂಡಿದ್ದು, AQUA TITAN ಟ್ಯಾಂಕರ್ ರಷ್ಯಾದ ಬಾಲ್ಟಿಕ್ ಸಮುದ್ರ ತೀರದಿಂದ ಹೊರಟಿದ್ದು, ಉರಲ್ಸ್ ಕ್ರೂಡ್ ಆಯಿಲ್ ನ್ನು ಹೊತ್ತೊಯ್ಯುತ್ತಿದೆ.
ಮೂಲಗಳ ಪ್ರಕಾರ, ಟ್ಯಾಂಕರ್ ಮೊದಲು ಚೀನಾಕ್ಕೆ ತೆರಳುತ್ತಿದ್ದರೂ, ಮಧ್ಯ ಸಮುದ್ರದಲ್ಲೇ ದಿಕ್ಕು ಬದಲಿಸಿ ಭಾರತಕ್ಕೆ ಬರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲ ವರದಿಗಳ ಪ್ರಕಾರ ಮತ್ತು ವಿವಿಧ ಶಿಪ್ ಟ್ರ್ಯಾಕಿಂಗ್ ಡೇಟಾ ಆಧಾರ, ಭಾರತಕ್ಕೆ ರಷ್ಯಾ ತೈಲ ಆಮದುಗಳು ದಿನಕ್ಕೆ ಸುಮಾರು 1.6 ಮಿಲಿಯನ್ ಬ್ಯಾರಲ್ ಮಟ್ಟ ತಲುಪಿವೆ. ಈ ತಿಂಗಳಲ್ಲೇ 30 ಮಿಲಿಯನ್ ಬ್ಯಾರಲ್‌ಗೂ ಹೆಚ್ಚು ತೈಲವನ್ನು ಭಾರತ ಖರೀದಿಸಿದೆ.
ಜಾಗತಿಕ ರಾಜಕೀಯ ಹಾಗೂ ಯುದ್ಧ ಪರಿಸ್ಥಿತಿಗಳ ನಡುವೆ, ಭಾರತವು ರಷ್ಯಾ ತೈಲದ ಪ್ರಮುಖ ಖರೀದಿದಾರನಾಗಿ ಮತ್ತೆ ಮುನ್ನಡೆ ಸಾಧಿಸುತ್ತಿದೆ. AQUA TITAN ಸೇರಿ ಹಲವು ಟ್ಯಾಂಕರ್‌ಗಳ ದಿಕ್ಕು ಬದಲಾವಣೆ, ಈ ಬದಲಾವಣೆಯ ಸ್ಪಷ್ಟ ಸಂಕೇತವಾಗಿದೆ.





