ಭಾರತ ಈಗ ವಿಶ್ವ ಮಟ್ಟದ ಯಾವುದೇ ಸವಾಲಿಗೂ ತಲೆದೋರಬಲ್ಲ ಶಕ್ತಿಯುತ ದೇಶವಾಗಿ ಬೆಳೆಯುತ್ತಿದೆ. ಭಾರತದ ಸೇನಾ ಶಕ್ತಿ, ಅದರ ಹೊಸ ತಂತ್ರಗಳು ಮತ್ತು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮೂಲಸೌಕರ್ಯಗಳು ದೇಶದ ಭದ್ರತೆಯನ್ನು ಗಟ್ಟಿಗೊಳಿಸುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಲಡಾಖ್‌ನ ಪೂರ್ವ ಭಾಗದಲ್ಲಿ ನಿರ್ಮಿಸಲಾದ ಮುದ್–ನ್ಯೋಮಾ ಏರ್‌ಬೇಸ್.
ಎಲ್ಲಿದೆ ಈ ಏರ್‌ಬೇಸ್?
ಲಡಾಖ್‌ನ ಚಾಂಗ್ಥಾಂಗ್ ಪ್ರದೇಶದಲ್ಲಿ, ಇಂಡಸ್ ನದಿಯ ಸಮೀಪದಲ್ಲಿರುವ ಈ ಏರ್‌ಬೇಸ್ ಸಮುದ್ರಮಟ್ಟದಿಂದ ಸುಮಾರು 13,700 ಅಡಿ ಎತ್ತರದಲ್ಲಿ ಇದೆ. ಇದು LAC (Line of Actual Control) ನಿಂದ ಕೇವಲ 25–30 ಕಿಮೀ ದೂರದಲ್ಲಿದ್ದು, ಇದು ತಂತ್ರಾತ್ಮಕವಾಗಿ ಬಹಳ ಮಹತ್ವದ್ದಾಗಿದೆ.
ಎಷ್ಟು ವೆಚ್ಚದಲ್ಲಿ ನಿರ್ಮಾಣ?
Border Roads Organisation (BRO) ವತಿಯಿಂದ ಸುಮಾರು ₹218 ಕೋಟಿ ವೆಚ್ಚದಲ್ಲಿ ಈ ಏರ್‌ಬೇಸ್ ನಿರ್ಮಿಸಲಾಗಿದೆ. ಇದರಲ್ಲಿ ರನ್‌ವೇ, ಹ್ಯಾಂಗರ್‌ಗಳು ಮತ್ತು ಆಧುನಿಕ ATC ವ್ಯವಸ್ಥೆಗಳು ಸೇರಿವೆ.
ಈ ಏರ್ ಬೇಸ್ ನ ಶಕ್ತಿ ಏನು?
ಈ ಏರ್‌ಬೇಸ್‌ನಲ್ಲಿ C-17 ಗ್ಲೋಬ್ಮಾಸ್ಟರ್, C-130J ಸೂಪರ್ ಹೆರ್ಕ್ಯುಲೆಸ್ ಹಾಗೂ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಕಾರ್ಯನಿರ್ವಹಿಸಬಹುದು. ಇದರಿಂದ ಸೇನೆಯ ಪ್ರತಿಕ್ರಿಯಾ ಸಮಯ ಗಂಟೆಗಳಿಂದ ನಿಮಿಷಗಳಿಗೆ ಇಳಿಯುತ್ತದೆ.
ಭಾರತಕ್ಕೆ ಇದು ಹೇಗೆ ರಕ್ಷಣೆ ಕೊಡುತ್ತದೆ?
ಈ ಏರ್‌ಬೇಸ್ ಉತ್ತರ ಗಡಿಯಲ್ಲಿ ಒಂದು “ಐರನ್ ಶೀಲ್ಡ್” (Iron Shield) ಹಾಗೆ ಕೆಲಸ ಮಾಡುತ್ತದೆ. ಇದರಿಂದ ಭಾರತೀಯ ವಾಯುಪಡೆಗೆ ಹೈ-ಆಲ್ಟಿಟ್ಯೂಡ್ ಪ್ರದೇಶದಿಂದಲೇ ನಿಗಾವಹಿಸುವ ಮತ್ತು ಅಗತ್ಯವಿದ್ದರೆ ದಾಳಿ ನಡೆಸುವ ಸಾಮರ್ಥ್ಯ ಸಿಗುತ್ತದೆ.
ಈ ಏರ್ ಬೇಸ್ ನ ಮುಖ್ಯ ಉಪಯೋಗ ಏನು?
ಇದು ಶಾಶ್ವತವಾಗಿ ಯುದ್ಧವಿಮಾನಗಳನ್ನು ಇರಿಸಲು ಅಲ್ಲ. ಆದರೆ ತುರ್ತು ಪರಿಸ್ಥಿತಿಯಲ್ಲಿ ವೇಗವಾಗಿ ಸೇನೆ ಮತ್ತು ಸಾಮಗ್ರಿಗಳನ್ನು ನಿಯೋಜಿಸಲು ಇದು ಬಹಳ ಮುಖ್ಯ ಕೇಂದ್ರವಾಗಿದೆ.
ಅತಿ ಕಷ್ಟದಲ್ಲೂ ನಿರ್ಮಾಣ!
ತಾಪಮಾನ -30°C ರಿಂದ -35°C ಮತ್ತು ಅಲ್ಲಿನ ಪರಿಸ್ಥಿತಿ ತೀವ್ರ ಹಿಮಪಾತವಾಗಿರುತ್ತದೆ. ಇಂತಹ ಕಠಿಣ ಪರಿಸ್ಥಿತಿಗಳಲ್ಲೂ BRO ಎಂಜಿನಿಯರ್‌ಗಳು ಕೇವಲ ಒಂದು ವರ್ಷದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ಇದು ಅವರ ಸಮರ್ಪಣೆ ಮತ್ತು ತಾಂತ್ರಿಕ ಸಾಮರ್ಥ್ಯದ ಸ್ಪಷ್ಟ ಸಾಕ್ಷಿ.
ಇಂತಹ ದೇಶ ರಕ್ಷಣೆಯ ಅಭಿವೃದ್ಧಿಗಳನ್ನು ನೋಡಿದಾಗ ಭಾರತದ ಶಕ್ತಿಯನ್ನು ಅರಿತು ಗೌರವಿಸಬೇಕಾದ ಕರ್ತವ್ಯ ಪ್ರತಿಯೊಬ್ಬ ಭಾರತೀಯನಾಗಿರುತ್ತದೆ.





