ಬೆಂಗಳೂರಿನಲ್ಲಿ ಬರಲಿದೆ ಹೈ ಕ್ಲಾಸ್ ಕ್ರಿಕೆಟ್ ಸ್ಟೇಡಿಯಂ

  • 11 Apr 2026 03:43:54 PM

ಬೆಂಗಳೂರು ನಗರದ ಆನೇಕಲ್ ತಾಲ್ಲೂಕಿನ ಸೂರ್ಯನಗರ 4ನೇ ಹಂತದಲ್ಲಿ ಬಹುದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಎಲ್ಲವೂ ಸಜ್ಜಾಗಿದೆ. ಈ ಭವ್ಯ ಕ್ರೀಡಾಂಗಣಕ್ಕೆ ಒಟ್ಟು 80,000 ಪ್ರೇಕ್ಷಕರ ಆಸನ ಸಾಮರ್ಥ್ಯ ಮತ್ತು ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ರೂಪರೇಖೆ ಚಿತ್ರೀಕರಿಸಲಾಗಿದೆ. 943.46 ಕೋಟಿ ರೂ. ವೆಚ್ಚವಿರುವ ಯೋಜನೆ ಮತ್ತು ಅಹಮದಾಬಾದ್‌ನ ಮೋದಿ ಸ್ಟೇಡಿಯಂ ಮಾದರಿಯಲ್ಲಿ ಬರಲಿದೆ.

 

ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಹಾಗೂ ದೊಡ್ಡ ಕ್ರೀಡಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ದೊಡ್ಡ ಸಭೆಗಳು ಮುಂತಾದವುಗಳು ಈ ಸ್ಟೇಡಿಯಂನಲ್ಲಿ ಜರಗುವ ರೀತಿಯಲ್ಲಿ ವಿನ್ಯಾಸ ಮಾಡಲಾಗುತ್ತದೆ. ಸ್ಥಳೀಯ ಉದ್ಯೋಗ, ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಕೂಡ ನೀಡಲಿದೆ.

 

ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ (M Chinnaswamy Stadium) ಪರ್ಯಾಯವಾಗಿದ್ದು, ನಗರ ಹೊರವಲಯದಲ್ಲಿರುವ ಕಾರಣ ಸಿಲಿಂಗ್ ಸಮಸ್ಯೆ, ಟ್ರಾಫಿಕ್ ಸಮಸ್ಯೆಗಳಿಲ್ಲದ ಸುಲಭ ಪ್ರವೇಶ ಮತ್ತು ಹೆಚ್ಚಿನ ಸಹಾಯಕ ಮೂಲಸೌಕರ್ಯಗಳಿಗಾಗಿ ತಯಾರಾಗುತ್ತಿದೆ.