ದುಬೈನಲ್ಲಿ, ಹಿಂದೂ ದೇವಸ್ಥಾನ ಮತ್ತು ಗುರುದ್ವಾರದಲ್ಲಿ ಮತ್ತೆ ಬಾಗಿಲು ತೆರೆದು ಭಕ್ತರಿಗೆ ಅವಕಾಶ

  • 11 Apr 2026 08:32:35 PM

ದುಬೈ: ಭದ್ರತೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಹಿನ್ನೆಲೆ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ ಗುರುದ್ವಾರ ಹಾಗೂ ಹಿಂದೂ ದೇವಸ್ಥಾನಗಳು ಇದೀಗ ಮತ್ತೆ ಭಕ್ತರಿಗೆ ತೆರೆಯಲ್ಪಟ್ಟಿವೆ.

 

ದುಬೈಯ ಜಬೆಲ್ ಅಲಿ ಪ್ರದೇಶದಲ್ಲಿರುವ ಹಿಂದೂ ಮಂದಿರ ಮತ್ತು ಗುರು ನಾನಕ್ ದರ್ಬಾರ್ ಗುರುದ್ವಾರ ಇದೀಗ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆಯಲಾಗುತ್ತದೆ.

 

ಭಕ್ತರಿಗೆ ಸಂಜೆ 5.30ರವರೆಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಹಿಂದೂ ಮಂದಿರ ಮತ್ತು ಗುರುದ್ವಾರದ ಆಡಳಿತ ಮಂಡಳಿ ಭಕ್ತರು ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.