ಇನ್‌ಸ್ಟಾಗ್ರಾಂ ನಲ್ಲಿ ಹಣಕ್ಕಾಗಿ ಅರೆಬೆತ್ತಲೆ ವಿಡಿಯೋ ಹಂಚಿಕೆ ಆರೋಪ: ನಟಿ ವಿಷ್ಣುಪ್ರಿಯಾ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ

  • 15 Apr 2026 02:12:00 PM

ಆಂಧ್ರಪ್ರದೇಶ ಮೂಲದ ತೆಲುಗು ನಟಿ ಮತ್ತು ಮಾದರಿ ವಿಷ್ಣುಪ್ರಿಯಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅರೆಬೆತ್ತಲೆ (semi-nude) ಫೋಟೋಗಳು ಮತ್ತು ವಿಡಿಯೋಗಳ ವಿಚಾರವಾಗಿ ವಿವಾದಕ್ಕೀಡಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಚಂದಾದಾರಿಕೆ (subscription) ವ್ಯವಸ್ಥೆಯ ಮೂಲಕ ವಿಶೇಷ ವಿಡಿಯೋ ಮತ್ತು ಇಮೇಜ್ ಗಳನ್ನು ವೀಕ್ಷಿಸಲು ಅವಕಾಶ ನೀಡಿರುವುದು ಗಮನಸೆಳೆಯುತ್ತಿದೆ.

 

ಮಾಹಿತಿಯ ಪ್ರಕಾರ, ವಿಷ್ಣುಪ್ರಿಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಅರೆನಗ್ನ ವಿಡಿಯೋ ಮತ್ತು ಫೋಟೊ ಗಳನ್ನು ವೀಕ್ಷಿಸಲು ತಿಂಗಳಿಗೆ ₹399 ಚಂದಾ ವಿಧಿಸಿರುವುದಾಗಿ ತಿಳಿದುಬಂದಿದೆ. ಚಂದಾದಾರಿಕೆ ಪಾವತಿಸಿದವರಿಗೆ ಮಾತ್ರ ಆ ವಿಶೇಷ ಫೋಟೋಗಳು ಮತ್ತು ವಿಡಿಯೋಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

 

ಈ ಹಿನ್ನೆಲೆಯಲ್ಲಿ ವಿಜಯವಾಡದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್ (AISF) ಸಂಘಟನೆಯು ವಿಷ್ಣುಪ್ರಿಯಾ ವಿರುದ್ಧ ದೂರು ಸಲ್ಲಿಸಿದೆ. ಯುವಜನತೆಗೆ ತಪ್ಪು ಸಂದೇಶ ನೀಡುವ ರೀತಿಯ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿದೆ ಎಂಬ ಆರೋಪವನ್ನು ದೂರುದಲ್ಲಿ ಉಲ್ಲೇಖಿಸಲಾಗಿದೆ. ಈ ದೂರು ಆಧರಿಸಿ ವಿಜಯವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

 

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚಂದಾದಾರಿಕೆ ಆಧಾರಿತ ಖಾತೆಗಳ ಮೂಲಕ ಕೆಲವರು ಹೆಚ್ಚಿನ ಆದಾಯ ಗಳಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಕೆಲ ಸಂದರ್ಭಗಳಲ್ಲಿ ಇಂತಹ ಆದಾಯವು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುವವರ ಸಂಬಳಕ್ಕಿಂತಲೂ ಅಧಿಕವಾಗಿರಬಹುದು ಎನ್ನಲಾಗುತ್ತಿದೆ.

 

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜವಾಬ್ದಾರಿ ಮತ್ತು ಕಾನೂನುಬದ್ಧತೆ ಅತ್ಯಂತ ಮುಖ್ಯವಾಗಿದ್ದು, ಪ್ರಕರಣದ ಬಗ್ಗೆ ಸೈಬರ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.