22 June 2026 |

406 ಟನ್ ರೈಲು ಎಳೆದ SUV! ದಾಖಲೆ ಪುಸ್ತಕಕ್ಕೆ ಸೇರಿದ ಎಂಜಿ ಮಜೆಸ್ಟರ್(MG Majestor)

  • 17 Apr 2026 11:15:27 AM

ಭಾರತೀಯ ಕಾರು ಮಾರುಕಟ್ಟೆಗೆ ಭಾರೀ ಎಂಟ್ರಿ ನೀಡಲು ಸಜ್ಜಾಗಿರುವ ಎಂಜಿ (MG) ಕಂಪನಿಯ ಹೊಸ ಫ್ಲಾಗ್‌ಶಿಪ್ ಮಾದರಿ ಎಂಜಿ ಮಜೆಸ್ಟರ್(MG Majestor), ಅಸಾಧ್ಯವೆನಿಸಿದ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದೆ.

 

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ, ಈ ಸ್ಟಾಕ್ ಪ್ರೊಡಕ್ಷನ್ SUV ಯಾವುದೇ ಬದಲಾವಣೆ ಇಲ್ಲದೆ 406.4 ಟನ್ ತೂಕದ ರೈಲನ್ನು 300 ಅಡಿ ದೂರ ಎಳೆದಿದೆ. ಈ ಸಾಧನೆಯೊಂದಿಗೆ ಅದು ಅಧಿಕೃತವಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪಟ್ಟಿಗೆ ಸೇರಿದೆ.

 

ಈ ಸಾಹಸ ಪ್ರದರ್ಶನ ಜಮ್ಮು ಕಾಶ್ಮೀರನಲ್ಲಿ ನಡೆದಿದ್ದು, SUV ಇತಿಹಾಸದಲ್ಲೇ “ಅತ್ಯಂತ ಭಾರವಾದ ರೈಲು ಎಳೆದ SUV” ಎಂಬ ಹೊಸ ದಾಖಲೆಯನ್ನು ನಿರ್ಮಿಸಿದೆ.

 

ಈ ಕಾರಿನ ಒಳಗೆ ಏನಿದೆ?

2.0 ಲೀಟರ್ ಟ್ವಿನ್-ಟರ್ಬೋ ಡೀಸೆಲ್ ಎಂಜಿನ್, ಟ್ರಿಪಲ್ ಡಿಫರೆನ್ಷಿಯಲ್ ಲಾಕ್ ವ್ಯವಸ್ಥೆ ಮತ್ತು 219 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ ಈ ಕಾರು.

 

ಫಾರ್ಚೂನರ್‌ಗೆ ಹೊಸ ಸವಾಲು?

ಏಪ್ರಿಲ್ 20, 2026ರಂದು ಅಧಿಕೃತ ಲಾಂಚ್ ಮುನ್ನವೇ, ಈ SUV ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 2026ರಲ್ಲಿ ಪ್ರಭುತ್ವ ಸಾಧಿಸಿರುವ SUVಗಳಿಗೆ ಇದು ನಿಜವಾದ “ಹೆವೀವೇಟ್ ಚಾಲೆಂಜರ್” ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

 

ಒಟ್ಟಾರೆಯಾಗಿ ಭಾರತದ ಆಟೋಮೊಬೈಲ್ ಮಾರ್ಕೆಟ್ ಬಹಳ ಪೈಪೋಟಿಯಲ್ಲಿ ಮುಂದುವರಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರುಗಳು ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುತ್ತಿವೆ. ಕಾರು ಖರೀದಿಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.