ಮಂಗಳೂರಿನ ನವ ಬಂದರಿಗೆ ಐಷರಾಮಿ ಕ್ರೂಸ್ ‘ಸೆವನ್ ಸೀಸ್ ಮರಿನರ್’ ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ

  • 20 Apr 2026 10:09:13 AM

ಮಂಗಳೂರು: ಮಂಗಳೂರಿನ ನವ ಬಂದರಿನಲ್ಲಿ ಶನಿವಾರ ಸ್ವಾಗತಿಸಿದ ಐಷರಾಮಿ ಕ್ರೂಸ್ ಹಡಗು ಮಂಗಳೂರಿನ ಪ್ರವಾಸೋದ್ಯಮ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. 

 

ಈ ಹಡಗಿನಲ್ಲಿ ಭೇಟಿ ನೀಡಿದ ಭೇಟಿ ನೀಡಿದ ಪ್ರವಾಸಿಗರಿಗೆ ಕಾರ್ಕಳ, ಮೂಡಬಿದ್ರಿ, ಪಿಲಿಕುಳ ಹಾಗೂ ಮಂಗಳೂರು ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ವಿಶೇಷ ಪ್ರವಾಸ ವ್ಯವಸ್ಥೆ ಕೂಡ ಮಾಡಲಾಗಿತ್ತು.

 

ಬಹಾಮಾಸ್ ಧ್ವಜ ಹೊಂದಿರುವ ಸೆವನ್ ಸೀಸ್ ಮರಿನರ್ (Seven Seas Mariner) ಕ್ರೂಸ್ ಹಡಗು ಕೊಚ್ಚಿಯಿಂದ ಹೊರಟು ನವ ಮಂಗಳೂರು ಬಂದರಿಗೆ ತಲುಪಿತ್ತು. ಮಂಗಳೂರು ನವ ಬಂದರು ಪ್ರಾಧಿಕಾರ ಈ ಐಷರಾಮಿ ಹಡಗನ್ನು ಸ್ವಾಗತಿಸಿದೆ. 

 

ಭಾರತದ ಪಶ್ಚಿಮ ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಸಲು ಇದೊಂದು ಬೆಳವಣಿಗೆಗೆ ಮಹತ್ವದ ಹೆಜ್ಜೆಯಾಗಿದೆ. ಬಂದರಿನ ಬೆರ್ಥ್ ನಂ. 4ರಲ್ಲಿ ನಿಲುಗಡೆಗೊಂಡಿದ್ದ ಈ ಹಡಗಿನಲ್ಲಿ ಒಟ್ಟು 607 ಪ್ರಯಾಣಿಕರು ಮತ್ತು 460 ಸಿಬ್ಬಂದಿ ಸದಸ್ಯರಿದ್ದರು. NMPA, ಕಸ್ಟಮ್ಸ್, ಇಮಿಗ್ರೇಶನ್, CISF ಹಾಗೂ ಇತರ ಸಿಬ್ಬಂದಿಗಳು ಹಡಗು ಹಾಗೂ ಪ್ರಯಾಣಿಕರ ನಿರ್ವಹಣೆಯನ್ನು ಸುಗಮವಾಗಿ ನಡೆಸಿದರು. 

 

ಹಡಗು ಮರ್ಮುಗೋವ್ ಕಡೆಗೆ ಮುಂದಿನ ಪ್ರಯಾಣವನ್ನು ಮುಂದುವರಿಸುತ್ತಿದ್ದು,  ಕರ್ನಾಟಕದ ಕರಾವಳಿ ಭಾಗ ಸಮುದ್ರ ಪ್ರದೇಶ ಹೊಂದಿದ್ದು ಮುಂದಿನ ದಿನ ಉತ್ತಮ ಮಟ್ಟದ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಬೆಳೆಸಲು ಬಂದರು ಮತ್ತು ಇನ್ನಿತರ ಪ್ರವಾಸೋದ್ಯಮ ಇಲಾಖೆ ಪ್ರಯತ್ನಿಸುತ್ತಿದೆ.