21 September 2026 |

ಭಾರತೀಯ ಸಿಬ್ಬಂದಿಗಳಿದ್ದ ಹಡಗಿಗೆ ಓಮನ್ ಬಳಿ ನಡೆದ ದಾಳಿಯಲ್ಲಿ ಮೂರೂ ನಾವಿಕರ ಸಾವು!

  • 11 Jun 2026 02:25:00 PM

ಒಮಾನ್ ಕರಾವಳಿ ಸಮೀಪದ ಹೋರ್ಮುಜ್ ಜಲಸಂಧಿಯ ಬಳಿ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯ ಬಳಿಕ 24 ಭಾರತೀಯ ಸಿಬ್ಬಂದಿಗಳ ಪೈಕಿ 21 ಮಂದಿಯನ್ನು ರಕ್ಷಿಸಲಾಗಿದೆ. ಮೂವರು ಭಾರತೀಯ ನಾವಿಕರಿಗಾಗಿ ಶೋಧ ಕಾರ್ಯ ಮುಂದುವರಿದಿತ್ತು.

 

ಆದರೆ, ದುರದೃಷ್ಟವಶತ್ ನಾಪತ್ತೆಯಾಗಿದ್ದ 3 ನಾವಿಕರು ಸಾವನಪ್ಪಿದ್ದಾರೆ. ಇರಾನ್ ತೈಲ ದಿಗ್ಬಂಧನ ಉಲ್ಲಂಘನೆ ಆರೋಪದ ಮೇಲೆ ಪಲಾವ್ ಧ್ವಜ ಹೊತ್ತ ಟ್ಯಾಂಕರ್ ಸೆಟ್ಟೆಬೆಲ್ಲೊವನ್ನು ಅಮೆರಿಕ ಸೇನೆ ಗುರಿಯಾಗಿಸಿಕೊಂಡ ನಂತರ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. 

 

ಘಟನೆಗೆ ಸಂಬಂಧಿಸಿದಂತೆ ಭಾರತ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ.

 

ಈ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಪ್ರದೇಶದಲ್ಲಿ ಉದ್ವಿಗ್ನತೆಯನ್ನು ತಕ್ಷಣ ಕಡಿಮೆ ಮಾಡುವಂತೆ (ಡಿ-ಎಸ್ಕಲೇಷನ್) ಕರೆ ನೀಡಿದೆ.