15 June 2026 |

ಕಮಲ ದೊಡ್ಡ ಇನ್ನಿಲ್ಲ – ಸಾಮಾಜಿಕ ಜಾಲತಾಣದಲ್ಲಿ ನಗು ಮೂಡಿಸಿದ ಅಜ್ಜಿಗೆ ಅಂತಿಮ ವಿದಾಯ

  • 14 Jun 2026 01:44:08 PM

ಮೂಡುಬಿದಿರೆ: ತಾಲೂಕಿನ ಮೂಡುಮಾರ್ನಾಡು ನಿವಾಸಿ, 85 ವರ್ಷದ ಕಮಲ ದೊಡ್ಡ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಾಲಿನ ಶಸ್ತ್ರಚಿಕಿತ್ಸೆ ನಂತರ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

 

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಭರಿತ ವೀಡಿಯೋಗಳ ಮೂಲಕ ಜನರನ್ನು ನಗಿಸುತ್ತಿದ್ದ ಕಮಲ ದೊಡ್ಡ ಅವರು ತುಳುನಾಡಿನ ಸಂಸ್ಕೃತಿ, ಹಳೆಯ ಜೀವನಶೈಲಿ ಮತ್ತು ಗ್ರಾಮೀಣ ಬದುಕಿನ ಬಗ್ಗೆ ಜನರಿಗೆ ಪರಿಚಯ ಮಾಡಿಕೊಡುತ್ತಿದ್ದರು. ಅವರ ನಗುಮುಖ ಮತ್ತು ಸರಳ ಮಾತುಗಳು ನೆಟ್ಟಿಗರ ಮನಗೆದ್ದಿದ್ದವು.

 

ದಿವಂಗತ ದೊಡ್ಡಣ್ಣ ಶೆಟ್ಟಿಯ ಪತ್ನಿಯಾಗಿದ್ದ ಕಮಲ ದೊಡ್ಡ ಅವರು, ಬೊಲ್ಪು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀನಿಥ್ ಶೆಟ್ಟಿ ಮಾರ್ನಾಡ್ ಅವರ ಅಜ್ಜಿಯಾಗಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮೂಲಕ ಅವರು ದೊಡ್ಡ ಜನಪ್ರಿಯತೆ ಪಡೆದಿದ್ದರು.

 

ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಸಂತಾಪ ಸೂಚಿಸಿದ್ದಾರೆ. ತುಳುನಾಡಿನ ಸಂಸ್ಕೃತಿಯನ್ನು ಜನರಿಗೆ ತಲುಪಿಸಿದ ಹಿರಿಯ ಜೀವಕ್ಕೆ ಇದು ದೊಡ್ಡ ನಷ್ಟವೆಂದು ಹಲವರು ಹೇಳಿದ್ದಾರೆ.