ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಚೀನಾದ ಪ್ರಭಾವದಿಂದ ಭಾರತದ ವಿರುದ್ಧ ಕಳ್ಳಾಟ ಆಡಲು ಶುರು ಮಾಡಿದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಚೀನಾದ ಪ್ರಧಾನಿಯನ್ನು ಭೇಟಿ ಮಾಡಿ ಸ್ವಲ್ಪ ಎಡವಟ್ಟು ಮಾಡಿದಂತಿದೆ.
ಮುಹಮ್ಮದ್ ಯೂನಸ್ ಮಾಡಿದ ಎಡವಟ್ಟೇನು ?
ಬಾಂಗ್ಲಾದೇಶ ಭಾರತ ನೆರೆಹೊರೆ ದೇಶ. ಇಡೀ ಬಂಗಾಳಕೊಲ್ಲಿ ಮತ್ತು ರಾಖೈನ್ ರಾಜ್ಯ ಹೊರತುಪಡಿಸಿದರೆ, ಬಾಂಗ್ಲಾದೇಶ ಭಾರತದಿಂದ ಸುತ್ತುವರಿಯಲ್ಪಟ್ಟಿದೆ. ಅವರಿಗೆ ಏನು ಬರಬೇಕಾದರು ಭಾರತದ ಮೂಲಕವೇ ಬರಬೇಕು. ನೇಪಾಳದಿಂದ ವಿದ್ಯುತ್ತು ಬರಬೇಕಾದರು ಭಾರತದ ಮುಖಾಂತರಣೆ ಬರಬೇಕು. ಭೂತಾನ್ ಗೆ ಯೂರಿಯ ಮಾರಾಟ ಮಾಡಬೇಕಾದರೂ ಭಾರತದ ನೆರವು ಬೇಕು. ಬಾಂಗ್ಲಾದ ಸಮುದ್ರ ತೀರಕ್ಕೆ ವ್ಯಾಪಾರ ವಹಿವಾಟುಗಳಿಗೆ ಸರಕು ಬರಬೇಕೆಂದರು ಅಥವಾ ಅಲ್ಲಿಂದ ಬೇರೆ ಕಡೆಗೆ ಹೋಗಬೇಕೆಂದರು ಭಾರತದ ಕೃಪಾಕಟಾಕ್ಷ ಬೇಕೇ ಬೇಕು.
ಆದರೆ ಇತ್ತೀಚಿಗೆ ಚೀನಾಕ್ಕೆ ಭೇಟಿ ನೀಡಿದ್ದ ಮುಹಮ್ಮದ್ ಯೂನಸ್ ನಾವು ಸಮುದ್ರದ ರಕ್ಷಕರು, ನಮಗೆ ಸಮುದ್ರ ಮಾರ್ಗವಿದೆ ಆದರೆ ಭಾರತದ ಈಶಾನ್ಯ ರಾಜ್ಯಗಳಿಗೆ ಸಮುದ್ರನೇ ಇಲ್ಲ ಅವು ಲ್ಯಾಂಡ್ ಲಾಕ್ಡ್ (Land Locked) ಆಗಿವೆ ಹೀಗಾಗಿ, ನೀವು ಬನ್ನಿ ನಮ್ಮ ಸಮುದ್ರಗಳನ್ನು ಬಳಸಿ ಕೊಲ್ಲಿ ನಿಮ್ಮ ಸರಕು ಸಾಮಗ್ರಿಗಳನ್ನು ನಮ್ಮಲ್ಲಿ ತಯಾರು ಮಾಡಿ, ಮಾರಾಟ ಮಾಡಿ, ಹಾಗೆ ಭಾರತ ಈಶಾನ್ಯ ರಾಜ್ಯಗಳಿಗೂ ನಿಮ್ಮ ವ್ಯಾಪಾರವನ್ನು ನಮ್ಮ ಮೂಲಕ ವಿಸ್ತರಿಸಿಕೊಳ್ಳಿ ಎನ್ನುವ ಬೇಡಿಕೆ ನೀಡಿದ್ದರು.
ಲ್ಯಾಂಡ್ ಲಾಕ್ ದೇಶಗಳು (Land Locked Countries) ಅಂದರೆ - ಭೂಆವೃತ ದೇಶ, ಅಟ್ಲಾಂಟಿಕ್‌ನಂತಹ ಸಾಗರಕ್ಕೆ ಅಥವಾ ಮೆಡಿಟರೇನಿಯನ್‌ನಂತಹ ಸಮುದ್ರಕ್ಕೆ ನೇರ ಪ್ರವೇಶವನ್ನು ಹೊಂದಿರದ ಸ್ವತಂತ್ರ ಸಾರ್ವಭೌಮ ದೇಶಗಳು.
ಸಿಲಿಗುರಿ ಕಾರಿಡಾರ್ ಸಮೀಪ ಒಂದು ಏರ್ ಬೇಸ್ ನ್ನು ಚೀನಾ ಅಭಿವೃದ್ಧಿ ಮಾಡಿ ಬಳಸಿಕೊಳ್ಳುವ ಒಪ್ಪಂದಕ್ಕೆ ಕೂಡ ಸಹಿ ಹಾಕಿ ಬಂದ ಬೆನ್ನಲ್ಲೇ ಭಾರತ ಬಾಂಗ್ಲಾದೇಶಕ್ಕೆ ಎಲ್ಲಾ ರೀತಿಯ ಸಂಪರ್ಕಗಳನ್ನೂ ಬಂದ್ ಮಾಡಿ ಆದೇಶಗಳನ್ನು ಹೊರಡಿಸಿದೆ. ಇನ್ನು ಮುಂದೆ ಬಾಂಗ್ಲಾಕ್ಕೆ ಭಾರತದ ಟ್ರಾನ್ಸ್ ಷಿಪ್ಮೆಂಟ್ (Transshipment) ವ್ಯವಸ್ಥೆ ಇರುವುದಿಲ್ಲ. ಇನ್ನು ಮುಂದೆ ಬಾಂಗ್ಲಾದೇಶ ಭಾರತದ ಬಂದರುಗಳನ್ನು ಸರಕು ಸಾಗಾಣಿಕೆಗೆ ಬಳಸುವ ಹಾಗಿಲ್ಲ. ಭಾರತದ ವಿಮಾನ ನಿಲ್ದಾಣಗಳು, ರಸ್ತೆಗಳು, ನೆಲ ಯಾವುದನ್ನೂ ಬಳಸುವಂತಿಲ್ಲ ಎಂದು ಘೋಷಿಸುವ ಮೂಲಕ ಬಾಂಗ್ಲಾದೇಶಕ್ಕೆ ಭಾರತದ ದೊಡ್ಡ ಹೊಡೆತ ನೀಡಿದೆ.
ಟ್ರಾನ್ಸ್‌ಶಿಪ್‌ಮೆಂಟ್ (Transshipment) ಎಂದರೆ ಸರಕುಗಳು ಅಥವಾ ಕಂಟೇನರ್ ಗಳನ್ನು ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಬಳಸುವ ಸ್ಥಳ.
ಬಾಂಗ್ಲಾದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ಕೊಡುತ್ತಿರುವುದು ಅಲ್ಲಿನ ಗಾರ್ಮೆಂಟ್ಸ್ ಅಂಡ್ ಟೆಕ್ಸ್ಟೈಲ್ಸ್ ಉದ್ಯಮ. ಅವರ ರಫ್ತ್ತು ಆದಾಯದ ಶೇಕಡಾ 80 ರಿಂದ 85 ದಷ್ಟು ಬಟ್ಟೆ ಮಾರಾಟದಿಂದ ಬರುತ್ತೆ. ಆದರೆ ಈಗ ಅಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಗಲಭೆಯ ಕಾರಣದಿಂದ ಸಾಕಷ್ಟು ಕಾರ್ಖಾನೆಗಳು ಮುಚ್ಚಿಹೋಗಿವೆ.
ಬಾಂಗ್ಲಾದೇಶಕ್ಕೆ ಭಾರತ ನೀಡಿದ್ದ ಈ ಮೊದಲ ಬಂಪರ್ ಅವಕಾಶ
ಕಳೆದ 2 ದಶಕಗಳಿಂದ ಭಾರತ ಬಾಂಗ್ಲಾದೇಶಕ್ಕೆ ಅದ್ಬುತ ಅವಕಾಶ ಕೊಟ್ಟಿತ್ತು ಅಂದರೆ, ಸಿಗರೇಟು ಮತ್ತು ಮದ್ಯವನ್ನು ಹೊರತು ಪಡಿಸಿ ಬೇರೆ ಯಾವುದೇ ವಸ್ತುವಿಗೆ ಭಾರತ ಸುಂಕ ಹಾಕುತ್ತಿರಲಿಲ್ಲ, ಹಾಗೆ ಭಾರತದ ಮೂಲಕ ಬೇರೆ ದೇಶಗಳಿಗೆ ಸರಬರಾಜು ಮಾಡುತ್ತಿದ್ದ ವಸ್ತುಗಳಿಗೆ ಕೂಡ ಭಾರತ ಸುಂಕ ವಿಧಿಸಿರಲಿಲ್ಲ. ಬಾಂಗ್ಲಾಕ್ಕೆ ಭಾರತದ ನೆಲ ಜಲ ವಾಯು ಮಾರ್ಗಗಳನ್ನು ಬಳಸಿಕೊಳ್ಳುವುದಕ್ಕೆ ಮುಕ್ತ ಅವಕಾಶವಿತ್ತು. ಆದರೆ ಬಾಂಗ್ಲಾದೇಶ ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ಇರಲಿಲ್ಲ.
ಬಾಂಗ್ಲಾದೇಶದ ವಾರ್ಷಿಕ ವಿದೇಶಿ ವ್ಯಾಪಾರ ಸುಮಾರು 55 ಬಿಲಿಯನ್ ಡಾಲರ್ ನಷ್ಟು. ಇದರಲ್ಲಿ 30 ರಿಂದ 35 % ರಷ್ಟು ಆಮದು ರಫ್ತು ಭಾರತದ ರಸ್ತೆಗಳು ಮತ್ತು ರೈಲ್ ಮಾರ್ಗಗಳನ್ನೂ ಬಳಸಿಕೊಂಡು ತನ್ನ ಸರಕುಗಳನ್ನು ಭೂತಾನ್, ನೇಪಾಳ, ಮಯನ್ಮಾರ್ ಗೆ ರವಾನೆ ಮಾಡುತ್ತಾ ಇತ್ತು. ಕೋಲ್ಕತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಹಲ್ದಿಯಾ ಬಂದರುಗಳ ಮೂಲಕ ಬಾಂಗ್ಲಾ ದೇಶದ ಸರಕುಗಳು ಬೇರೆ ಬೇರೆ ದೇಶಗಳಿಗೆ ರವಾನೆಯಾಗುತಿಟ್ಟು. ದೆಹಲಿ ಮತ್ತು ಕೋಲ್ಕತಾದ ವಿಮಾನ ನಿಲ್ದಾಣ ಕೂಡ ಬಾಂಗ್ಲಾ ದೇಶದ ರಫ್ತುಗಳಿಗಾಗಿ ಟ್ರಾನ್ಸಿಟ್ ಪಾಯಿಂಟ್ ಗಳಾಗಿ ಬಳಕೆ ಮಾಡಲಾಗುತಿತ್ತು. ಏಪ್ರಿಲ್ 8 ನೇ ತಾರೀಕಿನಿಂದ ಬಾಂಗ್ಲಾ ಇದು ಯಾವುದನ್ನೂ ಬಳಸಿಕೊಳ್ಳಲಾಗುವುದಿಲ್ಲ ಎಂದು ಭಾರತ ಕಟುವಾಗಿ ಹೇಳಿದೆ. ಭಾರತದ ಈ ಘೋಷಣೆಯಿಂದ ಬಾಂಗ್ಲಾದೇಶ ವ್ಯಾಪಾರ ಕ್ಷೇತ್ರದಲ್ಲಿ ಬಹಳ ಸಂಕಷ್ಟ ಎದುರಿಸಲಿದೆ.
ಯಾವುದೇ ದೇಶದ ಸಂಪರ್ಕ ಹೇಗೆ ನಿಲ್ಲಿಸಲಾಗುತ್ತೆ ? ಸಾಧ್ಯವೇ ?
ಜಾಗತಿಕ ವ್ಯಾಪಾರಗಳನ್ನು ನಿಯಂತ್ರಿಸುವ ವಿಶ್ವ ವ್ಯಾಪಾರ ಸಂಸ್ಥೆ (World Trade Organization) ಯ ಪ್ರಕಾರ ಭೂಮಿಯಿಂದ ಸುತ್ತುವರಿದ ದೇಶಗಳಿಗೆ ಯಾವುದೇ ಕಾರಣಕ್ಕೂ ರಸ್ತೆ ಸಂಪರ್ಕವನ್ನು ನಿರ್ಬಂಧಗೊಳಿಸುವ ಹಾಗೆ ಇಲ್ಲ ಎಂದು WTO ಹೇಳುತ್ತೆ. ನೀವು ಎಷ್ಟು ಬೇಕಾದರೂ ಸುಂಕ ವಿಧಿಸಬಹುದು ಆದರೆ ಸಾಗಾಣಿಕೆಗೆ ತೊಂದರೆ ಮಾಡುವ ಹಾಗಿಲ್ಲ ಅನ್ನುತ್ತೆ WTO ದ ಆರ್ಟಿಕಲ್ 5. ಇದನ್ನು ಫ್ರೀಡಂ ಆಫ್ ಟ್ರಾನ್ಸಿಟ್ ಅಂತ ಕರೆಯುತ್ತಾರೆ.
ಹೀಗಿರುವಾಗ ಭಾರತ ಈ ರಸ್ತೆ ಸಂಪರ್ಕವನ್ನೇ ಬಾಂಗ್ಲಾದೇಶಕ್ಕೆ ನಿರ್ಬಂದಿಸುವುದಕ್ಕೆ ಹೇಗೆ ಸಾಧ್ಯವಾಗುತ್ತೆ ? ಬಹುಶಃ ಯೂನಸ್ ಖಾನ್ ಕೂಡ ಈ ಯೋಚಿಸಿರಲು ಸಾಧ್ಯವಿಲ್ಲ ಅನಿಸುತ್ತೆ ಆದರೆ WTO ಕಾನೂನು ಪ್ರಕಾರ ತನ್ನ ಭದ್ರತೆಗೆ ಮತ್ತು ಸಾರ್ವಬೌಮತ್ವಕ್ಕೆ ದಕ್ಕೆ ಉಂಟಾಗುತ್ತೆ ಅನ್ನಿಸಿದಾಗ ಆ ಸಂಪರ್ಕವನ್ನು ಬಂದ್ ಮಾಡಬಹುದು ಅಂತ ಹೇಳುತ್ತೆ. ಅಂದರೆ ವ್ಯಾಪಾರದ ಹೆಸರಿನಲ್ಲಿ ದೇಶದ ರಕ್ಷಣೆಗೆ ದಕ್ಕೆ ಮಾಡಬಾರದು ಎನ್ನುವ ಅರ್ಥ. ಈ ನಿರ್ಧಾರಕ್ಕೆ ಭಾರತ ಕೊಡುವ ಕಾರಣ ಕೂಡ ಇದೇನೇ.
ಬಾಂಗ್ಲಾದೇಶ ಸಿಲಿಗುರಿ ಕಾರಿಡಾರ್ ನಲ್ಲಿ ಭಾರತದ ಗಡಿಯಿಂದ ಬರೀ 10km ದೂರದಲ್ಲಿ ವಾಯುನೆಲೆ ಮಾಡಿಸಿಕೊಳ್ಳುತ್ತಿದೆ ಅದಕ್ಕೆ ಚೀನಾ ಮತ್ತು ಪಾಕಿಸ್ತಾನಗಳನ್ನು ಆಹ್ವಾನಿಸುತ್ತ ಇದೆ. ಇದು ಭಾರತದ ಭದ್ರತೆಗೆ ಆತಂಕವನ್ನು ಉಂಟು ಮಾಡಲಿದೆ. ಬಾಂಗ್ಲಾ ದೇಶದ ಮೂಲಕ ಭಾರತಕ್ಕೆ ಅತಿ ಹೆಚ್ಚು ಪ್ರಮಾಣದ ಕಳ್ಳ ಸಾಗಾಟನೆ ಕೂಡ ಆಗುತ್ತಾ ಇದೆ. ಹೀಗಾಗಿ ಬಾಂಗ್ಲಾದೇಶಕ್ಕೆ ನಾವು ನೆಲ ಜನ ವಾಯು ಪ್ರದೇಶಕ್ಕೆ ಪ್ರವೇಶವನ್ನು ಕೊಡುವುದಿಲ್ಲ ಅನ್ನೋದು ಭಾರತದ ಮಾತು. ಇದನ್ನು ಕೇಳಿಕೊಂಡು ಬಾಂಗ್ಲಾ WTO ನ ಮೆಟ್ಟಿಲೇರಬಹುದು. ಮುಂದೆ ಏನು ಆಗಲಿದೆ ಕಾದುನೋಡಬೇಕಾಗಿದೆ.
ಒಟ್ಟಿನಲ್ಲಿ ಬಾಂಗ್ಲಾದ ವ್ಯಾಪಾರ ವಹಿವಾಟು 30 ರಿಂದ 40 ಕಡಿಮೆ ಆಗುವ ತರಹದ ಶಾಕ್ ಭಾರತ ನೀಡಿದೆ. ಕೋಲು ಕೊಟ್ಟು ಪೆಟ್ಟು ತಿಂದ ಹಾಗಿದೆ ಸದ್ಯದ ಬಾಂಗ್ಲಾದೇಶದ ಪರಿಸ್ಥಿತಿ.