ನವದೆಹಲಿ: ನೀಟ್ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದ ಪ್ರತಿಭಟನೆಗಳ ಕುರಿತು ಬಾಲಿವುಡ್ ನಟಿ ಆಕಾಂಕ್ಷಾ ಪುರಿ ಗಂಭೀರ ಆರೋಪ ಮಾಡಿದ್ದಾರೆ.
ತಮಗೆ CJP ಹಾಗೂ ಜಂತರ್ ಮಂತರ್ ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ಹಣದ ಆಫರ್ ನೀಡಲಾಗಿತ್ತು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಪ್ರತಿಭಟನೆಗೆ ಹಾಜರಾಗಲು ವಿಮಾನ ಟಿಕೆಟ್, ಹೋಟೆಲ್ ವಸತಿ ಸೇರಿದಂತೆ ರೀಲ್ಸ್ ಪೋಸ್ಟ್ ಮಾಡಲು ಸಹ ಹಣ ನೀಡುವುದಾಗಿ ಹೇಳಲಾಗಿತ್ತು ಎಂದು ಆರೋಪಿಸಿದ್ದಾರೆ.
ಇದೇ ರೀತಿಯ ಪ್ರಸ್ತಾಪವನ್ನು ಹಲವಾರು ಇತರ ಕಂಟೆಂಟ್ ಕ್ರಿಯೇಟರ್‌ಗಳಿಗೂ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಆದರೆ, ತಾವು ಆ ಆಫರ್ ಅನ್ನು ನಿರಾಕರಿಸಿದ್ದಾಗಿ ಹೇಳಿರುವ ಆಕಾಂಕ್ಷಾ ಪುರಿ, “ವಿದ್ಯಾರ್ಥಿಗಳ ಹೋರಾಟವನ್ನು ನಿಜವಾದ ಕಾಳಜಿಯಿಂದ ಬೆಂಬಲಿಸಬೇಕು. ಅದನ್ನು ಮಾರ್ಕೆಟಿಂಗ್ ಅವಕಾಶವನ್ನಾಗಿ ಬಳಸಬಾರದು. ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಅವರ ಬದುಕಿನೊಂದಿಗೆ ಆಟವಾಡಬೇಡಿ. ಈ ಬೆಳವಣಿಗೆಯಿಂದ ನನಗೆ ತುಂಬಾ ದುಃಖವಾಗಿದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಚಾರ ಹಾಗೂ ಪ್ರಭಾವ ಬೀರುವ ಪ್ರಯತ್ನಗಳ ಬಗ್ಗೆ ಪ್ರಶ್ನೆಗಳು ಮೂಡಿವೆ.





