26 July 2026 |

ಬೆಳ್ತಂಗಡಿಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಉರುಳಿ ಬಿದ್ದು ಅವಘಡ

  • 25 Jul 2026 05:44:04 PM

ಬೆಳ್ತಂಗಡಿ: ಭಾರೀ ಮಳೆ ಮತ್ತು ಬಿರುಗಾಳಿಯ ಪರಿಣಾಮ ರಸ್ತೆ ಬದಿಯಲ್ಲಿದ್ದ ಮರ ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಘಟನೆ ಶುಕ್ರವಾರ ಶಿಶಿಲ ಸಮೀಪದ ಬರ್ಗುಳದಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ.

 

ಅಪಾಯದಿಂದ ಪಾರಾದ ಬೈಕ್ ಸವಾರರನ್ನು ಶಿಶಿಲ ಗ್ರಾಮದ ದೇಣೋಡಿ ನಿವಾಸಿ ರತೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ಅವರು ಕೊಕ್ಕಡದಿಂದ ಶಿಶಿಲದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ರಸ್ತೆ ಬದಿಯಲ್ಲಿದ್ದ ಮರ ಬಲವಾದ ಗಾಳಿ ಮತ್ತು ಮಳೆಯಿಂದ ಬೇರುಸಹಿತ ಕಿತ್ತು ಬೈಕ್ ಮೇಲೆ ಬಿದ್ದಿದೆ.

 

ಮರ ವಿದ್ಯುತ್ ತಂತಿಗಳ ಮೇಲೂ ಬಿದ್ದ ಪರಿಣಾಮ ಆ ಭಾಗದಲ್ಲಿ ಕೆಲಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಅಲ್ಲದೆ, ರಸ್ತೆ ಸಂಚಾರಕ್ಕೂ ತಾತ್ಕಾಲಿಕ ಅಡಚಣೆ ಉಂಟಾಯಿತು.

 

ಘಟನೆಯ ಬಳಿಕ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಪಡೆಯ ಅರಸಿನಮಕ್ಕಿ–ಶಿಶಿಲ ಘಟಕದ ಸದಸ್ಯರು ಹಾಗೂ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸಿದರು. ನಂತರ ವಾಹನ ಸಂಚಾರವನ್ನು ಸುಗಮಗೊಳಿಸಲಾಯಿತು.