06 August 2026 |

ನಾಪತ್ತೆಯಾಗಿದ್ದ ಮಹಿಳೆ ಶಂಭೂರು ಡ್ಯಾಮ್ ಬಳಿ ಮೃತ ಸ್ಥಿತಿಯಲ್ಲಿ ಪತ್ತೆ

  • 26 Jul 2026 11:57:39 AM

ಪುತ್ತೂರು: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಮೃತದೇಹ ಬಂಟ್ವಾಳ ತಾಲೂಕಿನ ಶಂಭೂರು ಡ್ಯಾಮ್ ಸಮೀಪ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

 

ಪಡೂರು ಗ್ರಾಮದ ಅಜೇಯನಗರ ನಿವಾಸಿ ರಾಮ್ ಭಟ್ ಅವರ ಪತ್ನಿ ವಿಜಯ (60) ಮೃತರು ಎಂದು ಗುರುತಿಸಲಾಗಿದೆ. ಜುಲೈ 23ರಂದು ಪೇಟೆಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ವಿಜಯ ಅವರು ಬಳಿಕ ಮನೆಗೆ ಮರಳಿರಲಿಲ್ಲ. ಸಂಬಂಧಿಕರು ನಡೆಸಿದ ಹುಡುಕಾಟ ಫಲಕಾರಿಯಾಗದ ಹಿನ್ನೆಲೆಯಲ್ಲಿ ಜುಲೈ 24ರಂದು ಅವರ ಪತಿ ರಾಮ್ ಭಟ್ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

 

ದೂರಿನ ಆಧಾರದಲ್ಲಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೇ ದಿನ ತಡರಾತ್ರಿ ಶಂಭೂರು ಡ್ಯಾಮ್ ಬಳಿ ವಿಜಯ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

 

ಮೃತ ವಿಜಯ ಅವರು ಪತಿ ರಾಮ್ ಭಟ್ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ನಡೆಸುತ್ತಿದ್ದಾರೆ.