06 August 2026 |

ಬ್ಯಾಂಕ್ ಆಫ್ ಬರೋಡಾ ಗ್ರಾಹಕರ ಮಾಹಿತಿ ಸೋರಿಕೆ? ಆಧಾರ್ ಸೇರಿ ಸೂಕ್ಷ್ಮ ದಾಖಲೆಗಳು ಡಾರ್ಕ್ ವೆಬ್‌ನಲ್ಲಿ ಎಂಬ ಆತಂಕ

  • 28 Jul 2026 09:54:38 AM

ಮಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲೊಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda) ಯಲ್ಲಿ ಸೈಬರ್ ಭದ್ರತೆಗೆ ಸಂಬಂಧಿಸಿದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 

 

ಬ್ಯಾಂಕ್‌ನ ಕೆಲವು ಗ್ರಾಹಕರ ಮಾಹಿತಿ ಹಾಗೂ ಆಂತರಿಕ ದಾಖಲೆಗಳು ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಬ್ಯಾಂಕ್ ತನಿಖೆ ಆರಂಭಿಸಿದೆ. 

 

ವರದಿಗಳ ಪ್ರಕಾರ, ಸೋರಿಕೆಯಾದ ಮಾಹಿತಿಯಲ್ಲಿ ಗ್ರಾಹಕರ ಹೆಸರು, ಆಧಾರ್ ವಿವರಗಳು, ಬ್ಯಾಂಕ್ ಖಾತೆ ಮಾಹಿತಿ, ಸಾಲದ ದಾಖಲೆಗಳು ಸೇರಿದಂತೆ ಹಲವು ಸೂಕ್ಷ್ಮ ಮಾಹಿತಿಗಳು ಇರಬಹುದೆಂದು ಹೇಳಲಾಗಿದೆ. 

 

ಕೆಲವು ವರದಿಗಳಲ್ಲಿ ಸುಮಾರು 700 GB ರಿಂದ 1 TB ವರೆಗೆ ಡೇಟಾ ಸೋರಿಕೆಯಾಗಿರುವ ಸಾಧ್ಯತೆ ಉಲ್ಲೇಖಿಸಲಾಗಿದೆ. ಆದರೆ ಈ ಪ್ರಮಾಣವನ್ನು ಬ್ಯಾಂಕ್ ಅಧಿಕೃತವಾಗಿ ದೃಢಪಡಿಸಿಲ್ಲ. 

 

ಈ ಘಟನೆ ಉದ್ಯೋಗಿಯೊಬ್ಬರ ಇ-ಮೇಲ್ ಖಾತೆ ದುರುಪಯೋಗಗೊಂಡ ಪರಿಣಾಮ ಸಂಭವಿಸಿದೆ ಎಂದು ಬ್ಯಾಂಕ್ ತಿಳಿಸಿದೆ. ಆದರೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಹ್ಯಾಕ್ ಆಗಿಲ್ಲ ಹಾಗೂ ಗ್ರಾಹಕರ ಹಣ ಸುರಕ್ಷಿತವಾಗಿದೆಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಘಟನೆಯ ಬಗ್ಗೆ ಫೊರೆನ್ಸಿಕ್ ತನಿಖೆ ನಡೆಯುತ್ತಿದೆ. 

 

ಈ ಘಟನೆ ಕುರಿತು ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಅಧಿಕೃತ ವರದಿಯ ನಂತರವೇ ಸ್ಪಷ್ಟವಾಗಲಿದೆ.