06 August 2026 |

ಬಂಟ್ವಾಳ: ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸರ ದಾಳಿ; ಇಬ್ಬರು ವಶಕ್ಕೆ

  • 29 Jul 2026 12:59:41 PM

ಬಂಟ್ವಾಳ: ತಾಲೂಕಿನ ಮೇರಮಜಲು ಗ್ರಾಮದ ಮಯ್ಯಾಡಿ ಪ್ರದೇಶದಲ್ಲಿರುವ ಸರ್ಕಾರಿ ಗುಡ್ಡದ ಜಾಗದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ.

 

ದಾಳಿಯ ವೇಳೆ ಸುರೇಶ್ ಬಂಟ್ವಾಳ (38) ಹಾಗೂ ಸುರೇಶ್ ಶೆಟ್ಟಿ ಅಡ್ಯಾರ್ (61) ಅವರನ್ನು ಬಂಧಿಸಲಾಗಿದೆ. ಸ್ಥಳದಿಂದ ಸುಮಾರು ₹1,800 ಮೌಲ್ಯದ ಐದು ಕೋಳಿಗಳು ಸೇರಿದಂತೆ ಅಂಕಕ್ಕೆ ಬಳಸಲಾಗುತ್ತಿದ್ದ ಇತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

ಇದೇ ವೇಳೆ ಅರುಣ್, ಶರತ್ ಹಾಗೂ ಇನ್ನೂ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.