30 July 2026 |

ಒಮಾನ್‌ ದೇಶದಲ್ಲಿ ಕೆಲಸದ ವೇಳೆ ದುರಂತ: ಮೂಡಬಿದಿರೆಯ 33 ವರ್ಷದ ಯುವಕ ರಾಜವರ್ಮ ಜೈನ್ ಮೃತ್ಯು

  • 29 Jul 2026 07:29:47 PM

ಮೂಡಬಿದರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಸಾಣೂರು ಗ್ರಾಮದ ಯುವಕನೊಬ್ಬ ಒಮಾನ್‌ನಲ್ಲಿ ಸಂಭವಿಸಿದ ದುರಂತ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಜುಲೈ 27ರಂದು ನಡೆದಿದೆ.

 

ಮೃತರನ್ನು ಸಾಣೂರಿನ ಮೂಲಗುತ್ತು ನಿವಾಸಿ ರಾಜವರ್ಮ ಜೈನ್ (33) ಎಂದು ಗುರುತಿಸಲಾಗಿದೆ.

 

ಲಭ್ಯ ಮಾಹಿತಿಯ ಪ್ರಕಾರ, ರಾಜವರ್ಮ ಜೈನ್ ಅವರು ಒಮಾನ್‌ನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಕೆಲಸದ ವೇಳೆ ಸಹೋದ್ಯೋಗಿಯೊಬ್ಬರು ಕಂಪನಿಯ ವಾಹನವನ್ನು ಹಿಂಬದಿಗೆ ಚಲಾಯಿಸುತ್ತಿದ್ದಾಗ, ರಾಜವರ್ಮ ಜೈನ್ ಅವರು ಆಕಸ್ಮಿಕವಾಗಿ ವಾಹನದ ಚಕ್ರದಡಿ ಸಿಲುಕಿದ್ದಾರೆ ಎನ್ನಲಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

ಘಟನೆಯಿಂದ ಕುಟುಂಬಸ್ಥರು ಹಾಗೂ ಊರಿನ ನಿವಾಸಿಗಳಲ್ಲಿ ತೀವ್ರ ಶೋಕ ಆವರಿಸಿದೆ. ಮೃತದೇಹವನ್ನು ಸ್ವದೇಶಕ್ಕೆ ತರಲು ಅಗತ್ಯ ಕ್ರಮಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.