31 July 2026 |

ಅಮೆರಿಕ ಸಂಸತ್ತಿನ ಅಧಿಕೃತ ದಾಖಲೆಗಳಲ್ಲಿ ಡಾ. ಯು.ಟಿ. ಖಾದರ್ ಫರೀದ್ ಸಾಧನೆಗೆ ಸ್ಥಾನ

  • 30 Jul 2026 02:01:44 PM

ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಯು.ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ ಹಾಗೂ ನಾಯಕತ್ವವನ್ನು ಅಮೆರಿಕದ ಸಂಸತ್ತು ವಿಶೇಷವಾಗಿ ಗುರುತಿಸಿ ಗೌರವಿಸಿದೆ. ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್ಯಾಂಕಿಂಗ್ ಸದಸ್ಯ ಹಾಗೂ ಸಂಸದರಾಗಿರುವ ಜೊನಾಥನ್ ಜಾಕ್ಸನ್ ಅವರು, ಡಾ. ಖಾದರ್ ಫರೀದ್ ಅವರ ಸಾಧನೆಗಳನ್ನು ಒಳಗೊಂಡಿರುವ ಪ್ರತಿಷ್ಠಿತ "ಫಾರ್ ದಿ ಕಾಂಗ್ರೆಸ್‌ನಲ್ ರೆಕಾರ್ಡ್" ದಾಖಲೆಯನ್ನು ಅಧಿಕೃತವಾಗಿ ಅವರಿಗೆ ಪ್ರದಾನಿಸಿದರು.

 

ಜೊನಾಥನ್ ಜಾಕ್ಸನ್ ಅವರು ಖ್ಯಾತ ನಾಗರಿಕ ಹಕ್ಕುಗಳ ಹೋರಾಟಗಾರ ರೆವರೆಂಡ್ ಜೆಸ್ಸಿ ಜಾಕ್ಸನ್ ಅವರ ಪುತ್ರರಾಗಿದ್ದು, ಅಮೆರಿಕದ ರಾಜಕೀಯದಲ್ಲಿ "ಭವಿಷ್ಯದ ಬರಾಕ್ ಒಬಾಮಾ" ಎಂದು ಹಲವರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

ಡಾ. ಯು.ಟಿ. ಖಾದರ್ ಫರೀದ್ ಅವರ ಕುರಿತ ಈ ದಾಖಲೆಯನ್ನು ಅಮೆರಿಕದ ಸಂಸತ್ತಿನ ಅಧಿಕೃತ ಆರ್ಕೈವ್‌ನಲ್ಲಿ ಸೇರಿಸಲಾಗಿದ್ದು, ಅದು ಅಮೆರಿಕದ ಕಾಂಗ್ರೆಸ್ ಗ್ರಂಥಾಲಯದಲ್ಲಿ ಶಾಶ್ವತವಾಗಿ ಸಂರಕ್ಷಿಸಲ್ಪಡಲಿದೆ. ಇದೇ ವೇಳೆ, ಅಮೆರಿಕದ ಕ್ಯಾಪಿಟಲ್ ಹಿಲ್‌ನ ಸೆಂಟ್ರಲ್ ರೋಟುಂಡಾದಲ್ಲಿ ನೀಡಲಾಗುವ ಪ್ರತಿಷ್ಠಿತ ಕಾಂಗ್ರೆಸ್‌ನಲ್ ಚಾಲೆಂಜ್ ಮೆಡಲಿಯನ್ ಅನ್ನು ಜುಲೈ 28ರಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅವರಿಗೆ ಗೌರವಪೂರ್ವಕವಾಗಿ ಪ್ರದಾನಿಸಲಾಯಿತು.

 

ಈ ವಿಶೇಷ ಸಮಾರಂಭದಲ್ಲಿ ಅಮೆರಿಕ ಸಂಸದ ಜೊನಾಥನ್ ಜಾಕ್ಸನ್ ಅವರ ಹಿರಿಯ ಸಲಹೆಗಾರ ಡಾ. ವಿಜಯ್ ಜಿ. ಪ್ರಭಾಕರ್ ಹಾಗೂ AMEC USA ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನವೀನ್‌ಚಂದ್ರ ಕರ್ಣ ಉಪಸ್ಥಿತರಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.