ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ (CJP) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 2,873 ಮಂದಿಗೆ ಅಪರಾಧ ಹಿನ್ನೆಲೆ ಇದೆ ಎಂದು ದೆಹಲಿ ಪೊಲೀಸರು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ವರದಿಯ ಪ್ರಕಾರ, ಒಟ್ಟು 2,873 ಮಂದಿಯ ಪೈಕಿ 2,402 ಮಂದಿಯನ್ನು ‘ಕ್ರೈಂ ಕುಂಡ್ಲಿ’ (Crime Kundli) ಹಾಗೂ 471 ಮಂದಿಯನ್ನು ಡೋಸಿಯರ್ (Dossier) ದಾಖಲೆಗಳ ಮೂಲಕ ಗುರುತಿಸಲಾಗಿದೆ ಎಂದು ಹೇಳಲಾಗಿದೆ. ಇವರಲ್ಲಿ 989 ಮಂದಿಗೆ ಕೊಲೆ, ಕೊಲೆ ಯತ್ನ, ದರೋಡೆ, ಅತ್ಯಾಚಾರ, ಶಸ್ತ್ರಾಸ್ತ್ರ ಕಾಯ್ದೆ, ಎನ್‌ಡಿಪಿಎಸ್ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳಲ್ಲಿ ಹಿನ್ನೆಲೆ ಇರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ವರದಿಯಲ್ಲಿ ಉಲ್ಲೇಖವಾಗಿರುವ ಪ್ರಮುಖ ಪ್ರಕರಣಗಳ ವಿವರ ಹೀಗಿದೆ:
- ಕೊಲೆ – 101
- ಕೊಲೆ ಯತ್ನ – 62
- ದರೋಡೆ/ಲೂಟಿ – 284
- ಅತ್ಯಾಚಾರ – 61
- ಪೊಕ್ಸೊ ಪ್ರಕರಣ – 6
- ಮಹಿಳೆಯರ ಮೇಲೆ ದೌರ್ಜನ್ಯ – 25
- ಶಸ್ತ್ರಾಸ್ತ್ರ ಕಾಯ್ದೆ – 229
- ಸರ ಕಸಿಯುವ ಪ್ರಕರಣ – 135
- ಅಪಹರಣ – 19
- ಎನ್‌ಡಿಪಿಎಸ್ – 67
- ಇತರೆ ಐಪಿಸಿ/ಬಿಎನ್‌ಎಸ್ ಹಾಗೂ ವಿಶೇಷ ಕಾಯ್ದೆಗಳ ಪ್ರಕರಣಗಳು – 1,884
ಈ ವರದಿ ಬಹಿರಂಗವಾದ ಬಳಿಕ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಭಾಗವಹಿಸುವಿಕೆ ಕುರಿತು ಹೊಸ ಚರ್ಚೆ ಆರಂಭವಾಗಿದೆ ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ.





