06 August 2026 |

ಹವಾಮಾನ ಆಧಾರಿತ ಬೆಳೆ ವಿಮೆಗೆ ಅರ್ಜಿ ಸಲ್ಲಿಕೆ ಇಂದು ಅಂತ್ಯ

  • 31 Jul 2026 11:03:40 AM

ಮಂಗಳೂರು: ಪ್ರಸಕ್ತ ವರ್ಷದ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಅರ್ಜಿ ಸಲ್ಲಿಸಲು ಇಂದು (ಜುಲೈ 31) ಕೊನೆಯ ಅವಕಾಶವಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಸೂಚಿತ ಬೆಳೆಗಳಾದ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಈ ಯೋಜನೆಯಡಿ ವಿಮೆ ಸೌಲಭ್ಯ ಲಭ್ಯವಿದೆ. ಇದುವರೆಗೆ ಜಿಲ್ಲೆಯಿಂದ ಸುಮಾರು 1.25 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಹಲವು ಅರ್ಜಿಗಳು ಇನ್ನೂ ಬ್ಯಾಂಕ್‌ಗಳ ಅನುಮೋದನೆಗಾಗಿ ಬಾಕಿ ಉಳಿದಿವೆ.

 

ಬೆಳೆ ಸಾಲ ಪಡೆದಿರುವ ರೈತರ ಜೊತೆಗೆ ಬೆಳೆ ಸಾಲ ಪಡೆಯದ ರೈತರೂ ಸಹ ಯೋಜನೆಯಡಿ ನೋಂದಾಯಿಸಿ ವಿಮೆ ಸೌಲಭ್ಯ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.