21 September 2026 |

ಬೆಂಗಳೂರಿನಲ್ಲಿ ಮೀನಿನ ಕೊರತೆ: ಕರಾವಳಿ ಮೀನು ಪ್ರಿಯರಿಗೆ ನಿರಾಸೆ, ಗಗನಕ್ಕೇರಿದ ದರ

  • 31 Jul 2026 04:11:13 PM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮೀನುಗಳ ಕೊರತೆ ತೀವ್ರವಾಗಿದ್ದು, ಕರಾವಳಿ ಭಾಗದ ಮೀನು ಪ್ರಿಯರು ನಿರಾಸೆ ಅನುಭವಿಸುತ್ತಿದ್ದಾರೆ. ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಮೀನು ಪೂರೈಕೆಯಾಗದ ಹಿನ್ನೆಲೆಯಲ್ಲಿ ಹಲವು ಜನರು ತಮಗೆ ಬೇಕಾದ ಮೀನು ಸಿಗದೆ ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ಕರಾವಳಿ ಮೂಲದ ಸಾವಿರಾರು ಕುಟುಂಬಗಳು ಬೆಂಗಳೂರಿನಲ್ಲಿ ನೆಲೆಸಿದ್ದು, ಮೀನು ಅವರ ದೈನಂದಿನ ಆಹಾರದ ಪ್ರಮುಖ ಭಾಗವಾಗಿದೆ. ಆದರೆ ಇತ್ತೀಚಿನ ಕೊರತೆಯಿಂದ ನೆಚ್ಚಿನ ಮೀನುಗಳು ಸುಲಭವಾಗಿ ದೊರೆಯುತ್ತಿಲ್ಲ. ಇದರಿಂದ ಮೀನು ಪ್ರಿಯರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

 

ಮತ್ತೊಂದೆಡೆ, ಲಭ್ಯವಿರುವ ಮೀನುಗಳ ಬೆಲೆ ಕೂಡ ಭಾರೀ ಏರಿಕೆಯಾಗಿದೆ. ಸಾಮಾನ್ಯವಾಗಿ ಕೈಗೆಟುಕುವ ದರದಲ್ಲಿ ಸಿಗುತ್ತಿದ್ದ ಮೀನುಗಳಿಗೆ ಈಗ ಹೆಚ್ಚಿನ ಬೆಲೆ ತೆರಬೇಕಾಗಿದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ. ಮೀನುಗಳ ಕೊರತೆ ಹಾಗೂ ಬೆಲೆ ಏರಿಕೆ ಎರಡೂ ಸೇರಿ ಗ್ರಾಹಕರಿಗೆ ಹೆಚ್ಚುವರಿ ಹೊರೆ ಉಂಟುಮಾಡಿವೆ.

 

ಕರಾವಳಿ ಭಾಗದಲ್ಲಿ ಮೀನು ಹಿಡಿತ ಕಡಿಮೆಯಾಗಿರುವುದೇ ಬೆಂಗಳೂರಿನಲ್ಲಿ ಮೀನುಗಳ ಕೊರತೆ ಹಾಗೂ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.