ಬಂಟ್ವಾಳ: ಭಾರೀ ಮಳೆಯ ಹಿನ್ನೆಲೆಯಲ್ಲಿ ಬಿ.ಸಿ.ರೋಡ್–ಕೈಕಂಬ–ಪೊಳಲಿ ಮಾರ್ಗದ ಕಾಜಿಲ ಎಂಬಲ್ಲಿ ಬರೆ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಮಣ್ಣು ಹಾಗೂ ಮರದ ಕೊಂಬೆಗಳು ರಸ್ತೆಯ ಅಂಚಿಗೆ ಜಾರಿವೆ.
ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಲಾಗಿದೆ.
ನಿರಂತರ ಮಳೆಯ ಕಾರಣ ಮತ್ತಷ್ಟು ಮಣ್ಣು ಕುಸಿಯುವ ಅಥವಾ ಮರದ ಕೊಂಬೆಗಳು ಬೀಳುವ ಸಾಧ್ಯತೆ ಇರುವುದರಿಂದ ವೇಗ ನಿಯಂತ್ರಿಸಿಕೊಂಡು ಸುರಕ್ಷಿತ ಅಂತರ ಕಾಯ್ದುಕೊಂಡು ಸಂಚರಿಸುವುದು ಸೂಕ್ತ.
ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲದಿದ್ದರೂ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.





