ಮಂಗಳೂರು: ನ್ಯೂಮೋನಿಯಾ ಜ್ವರದಿಂದ ಬಳಲುತ್ತಿದ್ದ 12 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ದುರ್ಘಟನೆ ಮಂಗಳೂರು ಸಮೀಪದ ಗುರುಪುರ-ಕೈಕಂಬ ಸಮೀಪದ ಕಂದಾವರದಲ್ಲಿ ಮಂಗಳವಾರ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಋತ್ವಿ (12) ಎಂದು ಗುರುತಿಸಲಾಗಿದೆ. ಆಕೆ ಛಾಯಾಗ್ರಾಹಕ ದೀಪಕ್ ಕೋಟ್ಯಾನ್ ಹಾಗೂ ಜಯಶ್ರೀ ದಂಪತಿಯ ಪುತ್ರಿಯಾಗಿದ್ದಳು.
ಗುರುಪುರ-ಕೈಕಂಬದ ಕಿನ್ನಿಕಂಬಳದಲ್ಲಿರುವ ಬೆಥಣಿ ಸಿಬಿಎಸ್‌ಇ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಋತ್ವಿ ಕಳೆದ ಒಂದು ವಾರದಿಂದ ನ್ಯೂಮೋನಿಯಾ ಜ್ವರದಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಕುಟುಂಬಸ್ಥರು ಮತ್ತು ಪರಿಚಿತರಲ್ಲಿ ದುಃಖ ಮೂಡಿಸಿದೆ.





