17 August 2026 |

ದಕ್ಷಿಣ ಕನ್ನಡದಲ್ಲಿ BSNL 4G ಜಾಲ ವಿಸ್ತರಣೆ: ಶೇ.60ರಷ್ಟು ಕೆಲಸ ಪೂರ್ಣ

  • 16 Aug 2026 04:22:17 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ BSNL ಸಂಸ್ಥೆಯ 4G ಸೇವೆಯನ್ನು ಮತ್ತಷ್ಟು ಪ್ರದೇಶಗಳಿಗೆ ತಲುಪಿಸುವ ಕಾರ್ಯ ಮುಂದುವರಿದಿದ್ದು, ಈಗಾಗಲೇ ಸುಮಾರು ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

 

ವಿಶೇಷವಾಗಿ ಗ್ರಾಮೀಣ ಭಾಗಗಳು ಹಾಗೂ ಮೊಬೈಲ್ ಸಂಪರ್ಕದ ಕೊರತೆ ಎದುರಿಸುತ್ತಿರುವ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ 4G ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಯಡಿ ಈಗಾಗಲೇ 89 ಹೊಸ 4G BTS (ಬೇಸ್ ಟ್ರಾನ್ಸ್‌ಸೀವರ್ ಸ್ಟೇಷನ್) ಕೇಂದ್ರಗಳು ಕಾರ್ಯಾರಂಭ ಮಾಡಿವೆ.

 

ಹೊಸ ಕೇಂದ್ರಗಳ ಸ್ಥಾಪನೆಯಿಂದ ದೂರದ ಗ್ರಾಮಗಳಲ್ಲಿಯೂ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್‌ನೆಟ್ ಸಂಪರ್ಕದ ಗುಣಮಟ್ಟ ಸುಧಾರಿಸುವ ನಿರೀಕ್ಷೆ ಇದೆ. ಇದರಿಂದ ಸಂಪರ್ಕ ಸೌಲಭ್ಯ ಕಡಿಮೆ ಇರುವ ಪ್ರದೇಶಗಳ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

 

ದಕ್ಷಿಣ ಕನ್ನಡ ಟೆಲಿಕಾಂ ಜಿಲ್ಲೆಯ ಪ್ರಧಾನ ಮಹಾಪ್ರಬಂಧಕ ಹೇಮಂತ್ ಎಸ್. ಬೋರಲೆ ಅವರು ಈ ಮಾಹಿತಿ ನೀಡಿದ್ದಾರೆ. ಉಳಿದ ಕಾಮಗಾರಿಯನ್ನು ಕೂಡ ಹಂತ ಹಂತವಾಗಿ ಪೂರ್ಣಗೊಳಿಸಿ ಜಿಲ್ಲೆಯಾದ್ಯಂತ 4G ಸೇವೆಯ ವ್ಯಾಪ್ತಿಯನ್ನು ಹೆಚ್ಚಿಸುವ ಗುರಿಯನ್ನು BSNL ಹೊಂದಿದೆ.