09 June 2025 | Join group

ಪಾಕ್ ಮೇಲೆ ಭಾರತ ದಾಳಿ ಮಾಡಿದರೆ ನಾನು ಇಂಗ್ಲೆಂಡಿಗೆ ಪಲಾಯನ ಮಾಡುತ್ತೇನೆ, ಪಾಕಿಸ್ತಾನ ಸಂಸದ ಹೇಳಿಕೆ ಈಗ ಭಾರಿ ವೈರಲ್

  • 04 May 2025 04:54:07 PM

ಇಸ್ಲಾಮಾಬಾದ್, ಮೇ 04: ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದರೆ ನಾನು ಇಂಗ್ಲೆಂಡಿಗೆ ಪಲಾಯನ ಮಾಡುತ್ತೇನೆ ಎಂದು ಪಾಕಿಸ್ತಾನದ ಸಂಸದ ಹೇಳಿದ್ದಾನೆ. ಪಾಕಿಸ್ತಾನದ ಸಂಸದ ಅಫ್ಜಲ್ ಖಾನ್ ಮಾರ್ವತ್ ಪತ್ರಕರ್ತರ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

 

ಪತ್ರಕರ್ತರ " ಒಂದು ವೇಳೆ ಯುದ್ಧ ನಡೆದರೆ ನೀವು ಗನ್ ಹೊತ್ತುಕೊಂಡು ಗಡಿಗೆ ಹೋಗುತ್ತೀರಾ?" ಎಂದು ಕೇಳಿದ ಪ್ರಶ್ನೆಗೆ ಪಾಕ್ ಸಂಸದ "ನಾನು ಇಂಗ್ಲೆಂಡಿಗೆ ಪಲಾಯನ ಮಾಡುತ್ತೇನೆ" ಎಂದು ಉತ್ತರಿಸಿದ್ದಾನೆ.

 

ಪತ್ರಕರ್ತರ ಮುಂದಿನ ಪ್ರಶ್ನೆ " ಎರಡು ದೇಶಗಳ ಮಧ್ಯೆ ಇರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನರೇಂದ್ರ ಮೋದಿ ಹಿಂದೆ ಸರಿಯಬೇಕು ಎಂದು ಭಾವಿಸುತ್ತೀರಾ ? " ಎಂದು ಕೇಳಿದ ಪ್ರಶ್ನೆಗೆ " ಮೋದಿಯವರು ಹಿಂದೆ ಸರಿಯಲು ನನ್ನ ಚಿಕ್ಕಮ್ಮನ ಮಗನೇ" ಎಂದು ಉತ್ತರಿಸುತ್ತಾ ವ್ಯಂಗವಾಡಿದ್ದಾರೆ.

 

ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಸಂಸದರಿಗೆ ತಮ್ಮ ದೇಶದ ಸೈನ್ಯದ ಬಗ್ಗೆ ಯಾವುದೇ ವಿಶ್ವಾಸವಿಲ್ಲ, ಪಾಕಿಸ್ತಾನ ಸೈನ್ಯವನ್ನು ಅಲ್ಲಿನ ಸಂಸದರೇ ನಂಬುವ ಸ್ಥಿತಿಯಲ್ಲಿಲ್ಲ ಎಂದು ಕಾಮೆಂಟ್ ಮಾಡಿ ವ್ಯಂಗ ಮಾಡುತ್ತಿದ್ದಾರೆ.

 

ಈಗಾಗಲೇ ಪಾಕಿಸ್ತಾನದ ಕೆಲ ರಾಜಕಾರಣಿಗಳು ತಮ್ಮ ಕುಟುಂಬದ ಸದ್ಯಸರನ್ನು ಇಂಗ್ಲೆಂಡ್ ಗೆ ಸ್ಥಳಾಂತರ ಮಾಡಿರುವ ಬಗ್ಗೆ ವರದಿಯಾಗಿತ್ತು.