22 September 2026 |

ಬಂಟ್ವಾಳ: ತಾಯಿಯ ಅನಾರೋಗ್ಯದಿಂದ ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

  • 19 Aug 2026 08:39:50 PM

ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ನೈನಾಡು ನಿವಾಸಿಯಾಗಿರುವ 9ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

 

ನೈನಾಡು ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಸ್ಟ್ರೋಕ್‌ಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ತಂದೆ ಇಲ್ಲದ ಕಾರಣ ಕುಟುಂಬಕ್ಕೆ ತಾಯಿಯೇ ಮುಖ್ಯ ಆಧಾರವಾಗಿದ್ದರು.

 

ತಾಯಿಯ ಆರೋಗ್ಯದ ಬಗ್ಗೆ ಬಾಲಕ ಚಿಂತಿತನಾಗಿದ್ದ ಎನ್ನಲಾಗಿದ್ದು, ಶಾಲೆಯಲ್ಲಿಯೂ ತಾಯಿಯ ಆರೋಗ್ಯದ ಕುರಿತು ಸಹಪಾಠಿಗಳು ಹಾಗೂ ಶಿಕ್ಷಕರ ಬಳಿ ಆಗಾಗ್ಗೆ ವಿಚಾರಿಸುತ್ತಿದ್ದ ಎಂದು ತಿಳಿದುಬಂದಿದೆ.

 

ಮೃತ ಬಾಲಕ ಮೂವರು ಗಂಡು ಮಕ್ಕಳ ಪೈಕಿ ಕಿರಿಯವನಾಗಿದ್ದ. ಘಟನೆ ಕುರಿತು ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.