20 September 2026 |

ಪಿಕಪ್–ಆಕ್ಟಿವಾ ಡಿಕ್ಕಿ; ಇಬ್ಬರು ಯುವತಿಯರಿಗೆ ಗಂಭೀರ ಗಾಯ

  • 20 Aug 2026 09:02:17 AM

ವಿಟ್ಲ: ಪಿಕಪ್ ವಾಹನ ಹಾಗೂ ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿಲದ ಮುರುವ ತಿರುವಿನಲ್ಲಿ ನಡೆದಿದೆ.

 

ಅಪಘಾತದಲ್ಲಿ ಆಕ್ಟಿವಾ ಚಲಾಯಿಸುತ್ತಿದ್ದ ಯುವತಿ ಹಾಗೂ ಹಿಂಬದಿ ಸವಾರಿಯಾಗಿದ್ದ ಯುವತಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ವಾಹನದ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

 

ಗಾಯಗೊಂಡವರನ್ನು ಮಾಣಿಲ ನಿವಾಸಿಗಳಾದ ಮನ್ವಿತಾ ಹಾಗೂ ಕಾವ್ಯಶ್ರೀ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.