20 September 2026 |

ಕುಕ್ಕೆ ಕ್ಷೇತ್ರದಲ್ಲಿ ಆ.23, 24ರಂದು ಸರ್ಪ ಸಂಸ್ಕಾರ ಸೇರಿ ಕೆಲವು ಸೇವೆಗಳು ಸ್ಥಗಿತ

  • 22 Aug 2026 10:33:50 AM

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಮತ್ತು 24ರಂದು ಸರ್ಪಸಂಸ್ಕಾರ, ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳನ್ನು ನಡೆಸಲಾಗುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

 

ಆಗಸ್ಟ್ 23ರಂದು ಏಕಾದಶಿ ಹಾಗೂ ಆಗಸ್ಟ್ 24ರಂದು ಅತಿರಿಕ್ತ ಏಕಾದಶಿ ಇರುವ ಹಿನ್ನೆಲೆಯಲ್ಲಿ ಈ ಮೂರು ಸೇವೆಗಳಿಗೆ ಎರಡು ದಿನಗಳ ಕಾಲ ವಿರಾಮ ನೀಡಲಾಗಿದೆ.

 

ಆದರೆ ಭಕ್ತರಿಗೆ ದೇವರ ದರ್ಶನ ಸೇರಿದಂತೆ ಮಂಗಳಾರತಿ, ಅರ್ಚನೆ, ಮಹಾಪೂಜೆ ಹಾಗೂ ಇತರ ಸಾಮಾನ್ಯ ಪೂಜಾ ಸೇವೆಗಳು ಎಂದಿನಂತೆ ಲಭ್ಯವಿರಲಿವೆ ಎಂದು ದೇಗುಲದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.