ಮಂಗಳೂರು: ಕರ್ನಾಟಕದ ಮೊದಲ K-Combinator ಸ್ಟಾರ್ಟ್‌ಅಪ್ ವೇಗವರ್ಧನಾ ಕಾರ್ಯಕ್ರಮ ಆರಂಭಗೊಂಡಿದ್ದು, ಕರಾವಳಿ ಭಾಗದ ಹೊಸ ಉದ್ಯಮಗಳಿಗೆ ಬೆಳವಣಿಗೆಗೆ ಮತ್ತೊಂದು ವೇದಿಕೆ ದೊರೆತಿದೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಯೋಗದಲ್ಲಿ ರೂಪುಗೊಂಡಿರುವ ಈ ಕಾರ್ಯಕ್ರಮವನ್ನು TiE Mangaluru ಮುನ್ನಡೆಸಲಿದೆ. ಉಡುಪಿ–ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ಉದ್ಯಮ ತಜ್ಞರ ಮಾರ್ಗದರ್ಶನ, ವ್ಯಾಪಾರ ಸಂಪರ್ಕ, ಮಾರುಕಟ್ಟೆ ವಿಸ್ತರಣೆಯ ಅವಕಾಶ ಹಾಗೂ ಹೂಡಿಕೆ ಪಡೆಯಲು ಅಗತ್ಯ ಸಿದ್ಧತೆಗಳನ್ನು ಕಾರ್ಯಕ್ರಮದ ಮೂಲಕ ಒದಗಿಸಲಾಗುತ್ತದೆ.
ಪ್ರತಿ ಬ್ಯಾಚ್‌ಗೆ 4ರಿಂದ 6 ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಸಂಸ್ಥೆಗಳಿಗೆ 16 ವಾರಗಳ ತರಬೇತಿ, ಮಾಸ್ಟರ್‌ಕ್ಲಾಸ್‌ಗಳು, ಮೆಂಟರಿಂಗ್ ಹಾಗೂ ಹೂಡಿಕೆದಾರರೊಂದಿಗೆ ನೇರ ಸಂಪರ್ಕದ ಅವಕಾಶ ಇರಲಿದೆ.
ಅರ್ಹತಾ ಮಾನದಂಡಗಳನ್ನು ಪೂರೈಸುವ ಪ್ರತಿ ಬ್ಯಾಚ್‌ನ ಎರಡು ಸ್ಟಾರ್ಟ್‌ಅಪ್‌ಗಳಿಗೆ ತಲಾ ₹10 ಲಕ್ಷದವರೆಗೆ ಕಾರ್ಯಕ್ಷಮತೆ ಆಧಾರಿತ ಅನುದಾನ ಪಡೆಯುವ ಅವಕಾಶವೂ ಇದೆ.
ಈ ಯೋಜನೆಯನ್ನು ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ಒಟ್ಟು ₹9.26 ಕೋಟಿ ಅನುದಾನ ಮಂಜೂರಾಗಿದೆ. ಯೋಜನೆಯ ಮೊದಲ ಹಂತದಲ್ಲಿ ₹1.89 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
ಕರಾವಳಿ ಕರ್ನಾಟಕದಲ್ಲಿ ಹೊಸ ಉದ್ಯಮಗಳನ್ನು ಬೆಳೆಸಲು, ಸ್ಥಳೀಯ ಸ್ಟಾರ್ಟ್‌ಅಪ್‌ಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಹೂಡಿಕೆ ಅವಕಾಶಗಳನ್ನು ಒದಗಿಸಲು ಈ ಕಾರ್ಯಕ್ರಮ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ.





