ಬಂಟ್ವಾಳ: ಪಾಣೆಮಂಗಳೂರಿನ ಹಳೆ ಸೇತುವೆಯಲ್ಲಿ ಸಂಚರಿಸುತ್ತಿದ್ದ ಮಿನಿ ಟೆಂಪೋವೊಂದು ರಸ್ತೆಯ ತುದಿಯಲ್ಲಿ ದೊಡ್ಡ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಅಳವಡಿಸಿದ್ದ ವಾಹನ ತಡೆಯಲ್ಲಿ ಸಿಲುಕಿಕೊಂಡು ಅದನ್ನು ಹೊರ ತೆಗೆಯುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬ್ಯಾರಿಯರ್‌ನಿಂದ ಮಿನಿ ಟೆಂಪೋವನ್ನು ಹೊರತೆಗೆಯಲು ಪ್ರಯತ್ನಿಸಿದ ವೇಳೆ ವಾಹನದ ಮುಂಭಾಗ ಮೇಲಕ್ಕೆ ಎತ್ತಿಕೊಂಡ ರೀತಿಯಲ್ಲಿ ಕಂಡುಬಂದಿದೆ. ಈ ಸಂದರ್ಭದಲ್ಲಿ ವಾಹನದ ಮೇಲ್ಭಾಗದ ಕವರಿಂಗ್‌ಗೆ ಸಣ್ಣ ಪ್ರಮಾಣದ ಹಾನಿಯಾಗಿರುವುದು ಕಂಡುಬಂದಿದೆ.
ಮಿನಿ ಟೆಂಪೋ ಬ್ಯಾರಿಯರ್‌ನಲ್ಲಿ ಸಿಲುಕಿಕೊಂಡ ಪರಿಣಾಮ ಈ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೂ ತೊಂದರೆಯಾಯಿತು.
ಈಗಾಗಲೇ ಪಾಣೆಮಂಗಳೂರು ಹಳೆ ಸೇತುವೆಯನ್ನು ವಾಹನ ಸಂಚಾರಕ್ಕೆ ಬಳಸದೆ ಇರಲು ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವ ಅಗತ್ಯವಿದೆ.





