07 June 2025 | Join group

ಯುದ್ಧ ನಡೆದರೆ ಪಶ್ತೂನ್ ಮುಸ್ಲಿಂಮರು ಭಾರತದ ಬೆಂಬಲಕ್ಕೆ ನಿಲ್ಲಲಿದ್ದಾರೆ - ಪಶ್ತೂನ್ ಮುಖಂಡನ ಹೇಳಿಕೆ ಈಗ ಭಾರಿ ವೈರಲ್

  • 05 May 2025 09:14:10 PM

ಇಸ್ಲಾಮಾಬಾದ್ : ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನ ಪರಿಸ್ಥಿತಿಯ ನಡುವೆ, ಪಾಕಿಸ್ತಾನಕ್ಕೆ ಭಾರತದಿಂದ ಹೊಡೆತ ಬೀಳುವುದು ಮಾತ್ರವಲ್ಲದೆ ಪಾಕಿಸ್ತಾನದ ಒಳಗಡೆ ಕೂಡ ಸಕತ್ ಹೊಡೆತ ಬೀಳುತ್ತಿದೆ. ಒಂದು ಕಡೆ ಭಾರತ ಪಾಕ್ ವಿರುದ್ಧ ದಾಳಿ ನಡೆಸಿದರೆ ನಾವು ಪಾಕಿಸ್ತಾನ ಬಿಟ್ಟು ಇಂಗ್ಲೆಂಡ್ ಗೆ ಹೋಗುತ್ತೇವೆ ಎಂದು ಪಾಕಿಸ್ತಾನ ಸಂಸದ ಹೇಳುವುದರಿಂದ ಹಿಡಿದು, ಪಶ್ತೂನ್ ಮುಸ್ಲಿಮರು ಭಾರತದ ಜೊತೆ ನಿಲ್ಲುವುದಾಗಿ ಹೇಳುವವರೆಗೆ ಪಾಕಿಸ್ತಾನದಲ್ಲಿ ಗೊಂದಲಗಳಿವೆ.

 

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಇಸ್ಲಾಮಿಕ್ ಧರ್ಮಪ್ರಚಾರಕ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿದಾಡುತ್ತಿದೆ. 'ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಪಶ್ತೂನ್ ಜನರು ಭಾರತೀಯ ಸೈನಿಕರೊಂದಿಗೆ ನಿಲ್ಲಬೇಕು. ಪಾಕ್ ಸೈನಿಕರು ನಮ್ಮ ಮೇಲೆ ಮಾಡಿದ ದೌರ್ಜನ್ಯ ನಮಗೆಲ್ಲ ತಿಳಿದಿದೆ. ನಾವು ಎಂದಿಗೂ ಪಾಕಿಸ್ತಾನ ಜಿಂದಾಬಾದ್ ಹೇಳುವ ಪ್ರಮೇಯವೇ ಇಲ್ಲ. ಪಾಕಿಸ್ತಾನ ನಾವು ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ನೆನೆಸಿದ್ದೀರಾ ?' ಎಂದು ಕೋಪ ವ್ಯಕ್ತಪಡಿಸಿದ್ದರೆ.

 

ನಾನು ಜೈಲಿನಲ್ಲಿದ್ದಾಗ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೆ, ಕುರಾನ್ ಮೇಲೆ ನನಗೆ ನಂಬಿಕೆ ಇದೆ. ನಮ್ಮ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆ ಆಗುವುದು ಖಂಡಿತ ಎಂದು ಭಾಷಣದಲ್ಲಿ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.