20 September 2026 |

ಕಲ್ಲಡ್ಕದಲ್ಲಿ ನಡೆದ ಸಂಭ್ರಮದ ಮೊಸರು ಕುಡಿಕೆ ಉತ್ಸವ

  • 05 Sep 2026 06:58:13 PM

ಕಲ್ಲಡ್ಕ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕರಾವಳಿಯ ಪ್ರಸಿದ್ಧ ಮೊಸರು ಕುಡಿಕೆ ಉತ್ಸವ ಕಲ್ಲಡ್ಕದಲ್ಲಿ ಸಂಭ್ರಮದಿಂದ ನಡೆಯಿತು.

 

ಶ್ರೀಕೃಷ್ಣನ ಬಾಲಲೀಲೆಯನ್ನು ನೆನಪಿಸುವ ಮೊಸರು ಕೊಡಿಕೆ ಉತ್ಸವದಲ್ಲಿ ಮೊಸರು ತುಂಬಿದ ಮಡಕೆಗಳನ್ನು ಎತ್ತರದಲ್ಲಿ ಕಟ್ಟಿ, ಅವುಗಳನ್ನು ಒಡೆಯುವ ಸಂಪ್ರದಾಯ ಪ್ರಮುಖ ಆಕರ್ಷಣೆಯಾಗಿತ್ತು. ಮೆರವಣಿಗೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕಲಾ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು.

 

ಕಲ್ಲಡ್ಕದಲ್ಲಿ ಮೊಸರು ಕೊಡಿಕೆ ಉತ್ಸವಕ್ಕೆ ದೀರ್ಘಕಾಲದ ಪರಂಪರೆಯಿದ್ದು, ಹಿಂದಿನ ವರ್ಷಗಳಲ್ಲಿಯೂ ಶ್ರೀರಾಮ ಮಂದಿರದ ಆಶ್ರಯದಲ್ಲಿ ಅದ್ಧೂರಿಯಾಗಿ ಆಚರಿಸಲಾಗಿತ್ತು. ಈ ಬಾರಿಯ ಉತ್ಸವದಲ್ಲಿಯೂ ವಿವಿಧ ಸ್ತಬ್ಧಚಿತ್ರಗಳು, ವಾದ್ಯವೃಂದಗಳು, ಭಜನಾ ತಂಡಗಳು ಹಾಗೂ ಶ್ರೀಕೃಷ್ಣನ ವೇಷಧಾರಿ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದರು.

 

ಉತ್ಸವದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕಲ್ಲಡ್ಕದಲ್ಲಿ ನಡೆದ ಮಸಾರು ಕೊಡಿಕೆ ಉತ್ಸವ ಹಬ್ಬದ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.