ಸಾಮಾಜಿಕ ಜಾಲತಾಣಗಳಲ್ಲಿ ಇದೀಗ 1980ರ ದಶಕದ ಶೈಲಿಯ ಫೋಟೋಗಳನ್ನು ಸೃಷ್ಟಿಸುವ ಹೊಸ AI ಟ್ರೆಂಡ್ ಗಮನ ಸೆಳೆಯುತ್ತಿದೆ. ತಮ್ಮ ಸಾಮಾನ್ಯ ಫೋಟೋಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಹಳೆಯ ಕಾಲದ ರೆಟ್ರೋ ಲುಕ್‌ಗೆ ಪರಿವರ್ತಿಸಿಕೊಂಡು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹಳೆಯ ಕಾಲದ ಉಡುಪು, ಕೇಶವಿನ್ಯಾಸ, ಫೋಟೋಗಳ ಬಣ್ಣ ಮತ್ತು ಆ ಕಾಲದ ವಾತಾವರಣವನ್ನು ಹೋಲುವ ರೀತಿಯಲ್ಲಿ AI ಮೂಲಕ ಚಿತ್ರಗಳನ್ನು ರೂಪಿಸಲಾಗುತ್ತಿದೆ. ಈ ರೀತಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಳಕೆದಾರರಲ್ಲಿ ಹೊಸ ರೀತಿಯ ಕುತೂಹಲ ಮೂಡಿಸಿದೆ.
ಈ AI ಫೋಟೋ ಟ್ರೆಂಡ್‌ನ ಪ್ರಭಾವ ಭಾರತದಲ್ಲಿನ ಆನ್‌ಲೈನ್ ಹುಡುಕಾಟದಲ್ಲೂ ಕಾಣಿಸಿಕೊಂಡಿದೆ. ವಿಶೇಷವಾಗಿ “ChatGPT download” ಎಂಬ ಪದದ ಹುಡುಕಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.
AI ಆಧಾರಿತ ಫೋಟೋ ಎಡಿಟಿಂಗ್ ಮತ್ತು ಹೊಸ ರೀತಿಯ ಚಿತ್ರ ರಚನೆಯತ್ತ ಜನರ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಈ ರೆಟ್ರೋ ಫೋಟೋ ಟ್ರೆಂಡ್ ಮತ್ತೊಂದು ಉದಾಹರಣೆಯಾಗಿದೆ.





