ನವದೆಹಲಿ: BRICS ಶೃಂಗಸಭೆಯಲ್ಲಿ ಭಾರತದ ಆತಿಥ್ಯ ಮತ್ತು ಮಾಡಿರುವ ವ್ಯವಸ್ಥೆಗಳಿಗೆ UAE ಪತ್ರಕರ್ತೆ ಅಲ್ಯಾ ಮೊಹಮ್ಮದ್ ಒಬೈದ್ ಅಲಿ ಅಲ್‌ಧನ್ಹಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಉತ್ತಮ ಆತಿಥ್ಯ ಹಾಗೂ ಅದ್ಭುತ ವ್ಯವಸ್ಥೆ” ಎಂದು ಅವರು ಭಾರತದ ಆತಿಥ್ಯವನ್ನು ಶ್ಲಾಘಿಸಿದ್ದಾರೆ.
ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಗೆ ವಿವಿಧ ಸದಸ್ಯ ರಾಷ್ಟ್ರಗಳ ಗಣ್ಯರು ಹಾಗೂ ಪ್ರತಿನಿಧಿಗಳು ಆಗಮಿಸಿದ್ದಾರೆ. ವಿದೇಶಿ ಗಣ್ಯರಿಗಾಗಿ ದೆಹಲಿಯ ಪ್ರಮುಖ ಹೋಟೆಲ್‌ಗಳಲ್ಲಿ ವಿಶೇಷ ಆಹಾರ, ಆತಿಥ್ಯ ಮತ್ತು ಸಾಂಸ್ಕೃತಿಕ ಅನುಭವಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ.
ಭಾರತದ ಆತಿಥ್ಯ ವ್ಯವಸ್ಥೆಗೆ ವಿದೇಶಿ ಪ್ರತಿನಿಧಿಗಳಿಂದ ಬರುತ್ತಿರುವ ಇಂತಹ ಮೆಚ್ಚುಗೆಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ‘ಅತಿಥಿ ದೇವೋ ಭವ’ ಪರಂಪರೆಯನ್ನೂ ಮತ್ತೊಮ್ಮೆ ಗಮನ ಸೆಳೆಯುವಂತೆ ಮಾಡಿವೆ.





