14 September 2026 |

ಹಳೆಯ ವಾಹನ ಸ್ಕ್ರ್ಯಾಪ್ ಮಾಡಿದರೆ ₹50,000ವರೆಗೆ ತೆರಿಗೆ ರಿಯಾಯಿತಿ!

  • 13 Sep 2026 02:25:40 PM

ಬೆಂಗಳೂರು: ಕರ್ನಾಟಕದಲ್ಲಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ 14,042 ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ.

 

ಹಳೆಯ ವಾಹನವನ್ನು ಅಧಿಕೃತ Registered Vehicle Scrapping Facility (RVSF) ಯಲ್ಲಿ ಸ್ಕ್ರ್ಯಾಪ್ ಮಾಡಿದ ಬಳಿಕ ಸಿಗುವ Certificate of Deposit (CoD) ಆಧಾರದ ಮೇಲೆ ಹೊಸ ವಾಹನ ಖರೀದಿಸುವಾಗ ಮೋಟಾರು ವಾಹನ ತೆರಿಗೆಯಲ್ಲಿ ರಿಯಾಯಿತಿ ಪಡೆಯಬಹುದು.

 

ನಾಲ್ಕು ಚಕ್ರದ ವಾಹನ: ₹10,000ರಿಂದ ₹50,000ವರೆಗೆ ತೆರಿಗೆ ರಿಯಾಯಿತಿ

ಆಟೋ ರಿಕ್ಷಾ: ₹500 ತೆರಿಗೆ ರಿಯಾಯಿತಿ

ಹೊಸ ವಾಹನ ನೋಂದಣಿಯಲ್ಲೂ ಕೆಲವು ಹೆಚ್ಚುವರಿ ಪ್ರಯೋಜನಗಳು ಲಭ್ಯವಿದೆ ಎನ್ನಲಾಗಿದೆ.

 

ಹಳೆಯ ವಾಹನ ಹೊಂದಿರುವವರು ಸ್ಕ್ರ್ಯಾಪ್ ಮಾಡುವ ಮುನ್ನ ಅರ್ಹತೆ ಮತ್ತು ಲಭ್ಯವಿರುವ ರಿಯಾಯಿತಿಯನ್ನು ಪರಿಶೀಲಿಸಬಹುದು.