20 September 2026 |

ಸೆ.30ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ

  • 16 Sep 2026 01:51:16 PM

ಬೆಂಗಳೂರು: ರಾಜ್ಯದಲ್ಲಿ ರೇಷನ್ ಕಾರ್ಡ್‌ಗಳ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸೆಪ್ಟೆಂಬರ್ 30ರವರೆಗೆ ಮಾತ್ರ ಗಡುವು ನೀಡಲಾಗಿದೆ.
 

ಆದರೆ ನಿಗದಿತ ಅವಧಿ ಸಮೀಪಿಸುತ್ತಿದ್ದರೂ ಇ-ಕೆವೈಸಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯುತ್ತಿಲ್ಲ.

 

ರಾಜ್ಯದಲ್ಲಿ ಒಟ್ಟು 2.67 ಕೋಟಿ ರೇಷನ್ ಕಾರ್ಡ್‌ಗಳಿಗೆ ಇ-ಕೆವೈಸಿ ಮಾಡಬೇಕಿದ್ದು, ಈವರೆಗೆ 97.54 ಲಕ್ಷ ಕಾರ್ಡ್‌ಗಳಷ್ಟೇ ಇ-ಕೆವೈಸಿ ಪೂರ್ಣಗೊಂಡಿದೆ.

 

ಅಂದರೆ ಒಟ್ಟು ಪ್ರಕ್ರಿಯೆಯ 36.44% ಮಾತ್ರ ಮುಗಿದಿದ್ದು, ಇನ್ನೂ ಸುಮಾರು 1.70 ಕೋಟಿ ಕಾರ್ಡ್‌ಗಳಿಗೆ ಇ-ಕೆವೈಸಿ ಬಾಕಿಯಿದೆ.

 

ಇ-ಕೆವೈಸಿ ಪೂರ್ಣಗೊಳಿಸದ ಕಾರ್ಡ್‌ಗಳನ್ನು ರದ್ದುಗೊಳಿಸುವ ಸಾಧ್ಯತೆ ಇರುವುದರಿಂದ ಫಲಾನುಭವಿಗಳಲ್ಲಿ ಆತಂಕ ಹೆಚ್ಚಾಗಿದೆ.

 

ಮತ್ತೊಂದೆಡೆ ಸರ್ವರ್ ಸಮಸ್ಯೆಯೂ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 30ರ ಗಡುವನ್ನು ವಿಸ್ತರಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.