19 September 2026 |

ಭಾರತದಲ್ಲಿ iPhone 18 Pro ಮಾರಾಟ ಆರಂಭ; ಆಪಲ್ ಸ್ಟೋರ್‌ಗಳ ಮುಂದೆ ಗ್ರಾಹಕರ ದಟ್ಟಣೆ

  • 19 Sep 2026 10:02:52 AM

ಬೆಂಗಳೂರು: ಆಪಲ್‌ನ ಹೊಸ iPhone 18 Pro ಮತ್ತು iPhone 18 Pro Max ಸ್ಮಾರ್ಟ್‌ಫೋನ್‌ಗಳ ಮಾರಾಟ ಭಾರತದಲ್ಲಿ ಸೆಪ್ಟೆಂಬರ್ 18 ಶುಕ್ರವಾರದಿಂದ ಆರಂಭವಾಗಿದೆ. ಹೊಸ ಐಫೋನ್ ಖರೀದಿಸಲು ದೆಹಲಿ, ಮುಂಬೈ, ಬೆಂಗಳೂರು ಮತ್ತು ನೋಯ್ಡಾದ ಆಪಲ್ ಸ್ಟೋರ್‌ಗಳ ಮುಂದೆ ನಿನ್ನೆ ಬೆಳಗ್ಗಿನಿಂದಲೇ ಗ್ರಾಹಕರು ಸಾಲಿನಲ್ಲಿ ನಿಂತು ಖರೀದಿಸಿರುವ ಚಿತ್ರಣ ಕಂಡುಬಂದಿದೆ.

 

ಕೆಲವರು ಅಂಗಡಿಗಳು ತೆರೆಯುವ ಹಲವು ಗಂಟೆಗಳ ಮುನ್ನವೇ ಸ್ಥಳಕ್ಕೆ ಆಗಮಿಸಿದ್ದರು. ಬೆಂಗಳೂರಿನಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಗ್ರಾಹಕರು ಸ್ಟೋರ್‌ಗೆ ಬಂದಿದ್ದರೆ, ನೋಯ್ಡಾದಲ್ಲೂ ಮುಂಜಾನೆಯಿಂದಲೇ ಖರೀದಿದಾರರು ಕಾಯುತ್ತಿರುವ ದೃಶ್ಯ ಕಂಡುಬಂದಿದೆ. ದೆಹಲಿಯ ಸಾಕೇತ್‌ನಲ್ಲಿಯೂ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದ ಗ್ರಾಹಕರು ಹೊಸ ಮಾದರಿಯನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

 

ಭಾರತದಲ್ಲಿ iPhone 18 Pro ಬೆಲೆ 256GB ಮಾದರಿಗೆ ₹1,64,900ರಿಂದ ಆರಂಭವಾಗುತ್ತದೆ. iPhone 18 Pro Max 256GB ಮಾದರಿಯ ಆರಂಭಿಕ ಬೆಲೆ ₹1,79,900 ಆಗಿದೆ. ಬ್ಯಾಂಕ್ ಕಾರ್ಡ್ ಕ್ಯಾಶ್‌ಬ್ಯಾಕ್, ನೋ-ಕಾಸ್ಟ್ EMI ಮತ್ತು Apple Trade In ಸೇರಿದಂತೆ ಹಲವು ಖರೀದಿ ಆಯ್ಕೆಗಳನ್ನು ಗ್ರಾಹಕರಿಗೆ ನೀಡಲಾಗಿದೆ.

 

ಹೊಸ Pro ಸರಣಿಯಲ್ಲಿ 48MP Fusion Main ಕ್ಯಾಮೆರಾ, A20 Pro ಚಿಪ್ ಹಾಗೂ ಸುಧಾರಿತ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ.