ಕಾರ್ಕಳ, ಮೇ 10: ಕಾರ್ಕಳ ತಾಲೂಕಿನ ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದ ಗೋಡೆಯ ಮೇಲೆ ವಿದ್ಯಾರ್ಥಿನಿಯೊಬ್ಬಳು ದೇಶ ವಿರೋಧಿ ಬರಹಗಳನ್ನು ಬರೆದಿದ್ದಾಳೆ. ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ದೇಶ ವಿರೋಧಿ ಬರಹ ಹಾಕಿದ ವಿದ್ಯಾರ್ಥಿನಿ ತಲೆಮರೆಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ : ವ್ಯಕ್ತಿಯ ಬಂಧನ
“ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ ಬೋಲ್”. “ಮುಸ್ಲಿಂ ಜಿಂದಾಬಾದ್ ಹಿಂದೂ ಫಕ್ ಆಫ್” (Hindustan nahi muslim sthan bolo, Muslim zidabad Hindu fuck off) ಎಂಬ ದೇಶ ವಿರೋಧಿ ಬರಹ, ಕಾರ್ಕಳ ಜನತೆಯನ್ನು ನಿಬ್ಬೆರಗಿಸಿದೆ.
ದೇಶ ವಿರೋಧಿಗಳು ದೇಶದಿಂದ ಹೊರಗೆ ಇಲ್ಲ, ನಮ್ಮ ಸುತ್ತಮುತ್ತಲೇ ಇದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಒಬ್ಬ ವಿದ್ಯಾರ್ಥಿನಿ ಈ ಬರಹ ಹಾಕಿದ್ದಾಳೆ ಎಂದು ವರದಿಯಾಗಿದೆ, ಪೊಲೀಸರ ತನಿಖೆ ನಂತರ ತಿಳಿದು ಬರಲಿದೆ ಇದರ ಹಿಂದೆ ಎಷ್ಟು ದೇಶದ್ರೋಹಿಗಳು ಇದ್ದಾರೆ ಎನ್ನುವುದು.