ಮಂಡ್ಯ: ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಇರುವ ಉದ್ವಿಗ್ನತೆ ಸಂದರ್ಭದಲ್ಲಿ ಸಾಮಾಜಿಕ ಜಾಣತಾಲದಲ್ಲಿ ಯುದ್ಧಕ್ಕೆ ಸಂಬಂಧಪಟ್ಟಂತೆ ಪೋಸ್ಟ್ ಗಳು ಹರಿದಾಡುತ್ತಿದೆ. ಕೆಲವರು ಯುದ್ಧಕ್ಕೆ ಸಂಬಂಧಪಟ್ಟಂತೆ ನಕಲಿ ಪೋಸ್ಟ್ ಗಳನ್ನೂ ಹಾಕುತ್ತಿದ್ದು ಈಗಾಗಲೇ ಸರಕಾರಗಳು ಯಾವುದೇ ಅನಾವಶ್ಯಕ ಪೋಸ್ಟ್ ಗಳನ್ನು ಹಾಕಬಾರದೆಂಬ ಎಚ್ಚರ ಕೊಟ್ಟಿದೆ.
ಆದರೆ ಈ ಸಂದರ್ಭದಲ್ಲಿ ಮಂಡ್ಯದಲ್ಲಿ ಮುಸ್ಲಿಂ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಜಾವೀದ್ ಎಂಬ ಯುವಕ ಎಐ ತಂತ್ರಜ್ಞಾನ ಬಳಸಿ ಅತೀ ಕೆಟ್ಟ ರೀತಿಯಲ್ಲಿ ಪೋಸ್ಟ್ ಒಂದನ್ನು ತಯಾರಿಸಿದ್ದ.
ಇದನ್ನೂ ಓದಿ : 'ಹಿಂದೂಸ್ತಾನ್ ನಹಿ, ಮುಸ್ಲಿಂಸ್ಥಾನ್ ಬೋಲೋ'.. ಕಾರ್ಕಳದಲ್ಲಿ ವಿದ್ಯಾರ್ಥಿಯೊಬ್ಬಳ ದೇಶ ವಿರೋಧಿ ಬರಹ
“ಪ್ರಧಾನಿ ಮೋದಿಯವರು ಇಮ್ರಾನ್ ಖಾನ್ ಕಾಲು ಹಿಡಿಯುತ್ತಿರುವ ಮತ್ತು ಶೂ ಬಿಚ್ಚುವ ರೀತಿಯಲ್ಲಿ ಫೋಟೋ ಒಂದನ್ನು ಎಐ ತಂತ್ರಜ್ಞಾನ ಮೂಲಕ ಎಡಿಟ್ ಮಾಡಿದ್ದಾನೆ. ಬಳಿಕ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.