ಬೆಳ್ತಂಗಡಿ: ತಾಲೂಕಿನ ನಲ್ಕೂರು ಗ್ರಾಮದ ಪಾಡಿ ಸಮೀಪದ ಕೃಷಿ ಜಮೀನಿನಲ್ಲಿ ಸೆ. 28ರ ಸಂಜೆ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.
ಜಮೀನನ್ನು ಯಂತ್ರದ ಮೂಲಕ ಸ್ವಚ್ಛಗೊಳಿಸುತ್ತಿದ್ದ ವೇಳೆ ಹೊಳೆಯ ಸಮೀಪ ತಲೆಬುರುಡೆ, ಮೂಳೆಗಳು ಹಾಗೂ ಬಟ್ಟೆಗಳು ಪತ್ತೆಯಾಗಿವೆ.
ಪಾಡಿ ನಿವಾಸಿ ವಿನೋದ್ ಅವರಿಗೆ ಸೇರಿದ ಜಮೀನನ್ನು ಮಜ್ಜೆನಿಬೈಲು–ಪಾಡಿ ನಿವಾಸಿ ಸುರೇಶ್ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಮಾಹಿತಿ ತಿಳಿದು ವೇಣೂರು ಪೊಲೀಸರು ಹಾಗೂ ಸೀನ್ ಆಫ್ ಕ್ರೈಮ್ ಆಫೀಸರ್ಸ್ (SOCO) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಪತ್ತೆಯಾದ ಅಸ್ಥಿಪಂಜರ ಯಾರದ್ದು ಹಾಗೂ ಸಾವಿಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





