05 November 2026 |

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

  • 30 Sep 2026 09:30:29 AM

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆ ಬಳಿ ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

 

ಮೃತರನ್ನು ಭರತ್ ಪೂಜಾರಿ (29) ಮತ್ತು ಹರ್ಷನ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಐವರು ಸ್ನೇಹಿತರು ಒಟ್ಟಾಗಿ ನದಿಗೆ ತೆರಳಿದ್ದರು.

 

ಮಂಗಿಲಾರು ಮಾರ್ಗವಾಗಿ ಸುಮಾರು ಎರಡು ಕಿಲೋಮೀಟರ್‌ಗಳಷ್ಟು ದುರ್ಗಮ ದಾರಿಯನ್ನು ಕ್ರಮಿಸಿ ಅವರು ನದಿ ತೀರಕ್ಕೆ ತಲುಪಿದ್ದರು. ಬಳಿಕ ಈಜಲು ಮುಂದಾದಾಗ ಭರತ್ ಹಾಗೂ ಹರ್ಷನ್ ಆಳವಾದ ನೀರಿನ ಭಾಗಕ್ಕೆ ತೆರಳಿದ್ದು, ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.