ಭಾರತ ಮತ್ತು ಪಾಕಿಸ್ತಾನದ ನಡುವೆ ಕದಮ ವಿರಾಮ ಘೋಷಣೆಯಾಗಿದೆ. ಉಭಯ ದೇಶಗಳ ನಡುವೆ ಅಮೆರಿಕಾ ಶಾಂತಿ ಮಾತುಕತೆ ನಡೆಸಿದ್ದು, ಇಂದು ಸಂಜೆ 5 ಗಂಟೆಯಿಂದಲೇ ಕದಮ ವಿರಾಮ ಘೋಷಣೆ ಮಾಡಲಾಗಿದೆ.
'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ಅಲ್ಲಿ ನೆಲೆಸಿರುವ 9 ಉಗ್ರ ತಾಣಗಳಿಗೆ ದಾಳಿ ಮಾಡಿ ಎಲ್ಲಾ ಉಗ್ರ ತಾಣಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ನಾಗರಿಕರ ಮೇಲೆ ದಾಳಿ ನಡೆಸಿತ್ತು. ಅದಾದ ಬಳಿಕ ಉಭಯ ದೇಶಗಳ ನಡುವೆ ಯುದ್ಧದ ಆತಂಕ ನಡೆದಿತ್ತು. ಸದ್ಯ ಎರಡು ದೇಶಗಳ ನಡುವೆ ಅಮೆರಿಕಾ ಶಾಂತಿ ಮಾತುಕತೆ ನಡೆಸಿ ಯಶಸ್ವಿಯಾಗಿದ್ದು ಇಂದು ಸಂಜೆ 5 ಗಂಟೆಯಿಂದಲೇ ಕದಮ ವಿರಾಮ ಘೋಷಣೆ ಮಾಡಿರುವುದಾಗಿ ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಮೇ 12 ರಂದು ಎರಡು ದೇಶಗಳ ನಡುವೆ ಮಾತುಕತೆ ನಡೆಯಲಿದ್ದು, ಹೆಚ್ಚಿನ ಮಾಹಿತಿ ಅಂದು ದೊರೆಯಲಿದೆ. "ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಇದೀಗ ಪೂರ್ಣ ವಿರಾಮ ಏರ್ಪಟ್ಟಿದೆ" ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.