ಪುತ್ತೂರು: ಕುಂಜೂರುಪಂಜ ದೇವಸ್ಯ ಸಮೀಪದಲ್ಲಿ ಕೇರಳದತ್ತ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪತ್ತೆಹಚ್ಚಲಾಗಿದೆ.
ಅಕ್ಟೋಬರ್ 5ರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಬುಳೇರಿಕಟ್ಟೆ ಮಾರ್ಗವಾಗಿ ಸಾಗುತ್ತಿದ್ದ ವಾಹನವನ್ನು ಪತ್ತೆ ಮಾಡಲಾಗಿದ್ದು, ಅದರಲ್ಲಿದ್ದ 11 ಗೋವುಗಳನ್ನು ರಕ್ಷಿಸಲಾಗಿದೆ.
ಗೋವುಗಳನ್ನು ಕೈಕಾಲುಗಳನ್ನು ಕಟ್ಟಿ, ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ವಾಹನ ಪತ್ತೆಯಾದ ಸಂದರ್ಭದಲ್ಲಿ ಅದರಲ್ಲಿದ್ದವರು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





