16 October 2026 |

ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆ!

  • 15 Oct 2026 09:47:40 AM

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಂಜಾರು ಗ್ರಾಮದ ಸುರೇಶ್ ಶೆಟ್ಟಿ (51) ಅವರ ಮೃತದೇಹ ಅಕ್ಟೋಬರ್ 14ರಂದು ಪತ್ತೆಯಾಗಿದೆ. ಅಕ್ಟೋಬರ್ 9ರಿಂದ ಅವರು ನಾಪತ್ತೆಯಾಗಿದ್ದರು.

 

ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ ಸೇತುವೆಯ ಕೆಳಭಾಗದಲ್ಲಿರುವ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕುಟುಂಬದವರು ಗುರುತು ಪತ್ತೆಹಚ್ಚಿದ್ದಾರೆ. ಮಾಹಿತಿ ತಿಳಿದ ಕಾರ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಸುರೇಶ್ ಶೆಟ್ಟಿ ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.