10 June 2025 | Join group

ವಿದ್ಯಾರ್ಥಿಗಳಿಗೆ ಮೋದಿ ಸಂದೇಶ: ಒಂದು ಪರೀಕ್ಷೆಯು ನಿಮ್ಮನ್ನು ಎಂದಿಗೂ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಿಮ್ಮ ಪ್ರಯಾಣವು ತುಂಬಾ ದೊಡ್ಡದಾಗಿದೆ..

  • 14 May 2025 12:42:09 AM

CBSE Result 2025, May 13: ಸೆಂಟ್ರಲ್ ಬೋರ್ಡ್ ಫಲಿತಾಂಶ ಬಂದ ಬೆನ್ನಲ್ಲಿ ಪ್ರಧಾನ ಮಂತ್ರಿ ಮೋದಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಸಲುವಾಗಿ ಸಂದೇಶವೊಂದನ್ನು ಕಳುಹಿಸಿದ್ದಾರೆ.

 

"ತಮ್ಮ ಅಂಕಗಳಿಂದ ಸ್ವಲ್ಪ ನಿರಾಶೆಗೊಂಡವರಿಗೆ, ನಾನು ಹೇಳಬಯಸುವುದೇನೆಂದರೆ: ಒಂದು ಪರೀಕ್ಷೆಯು ನಿಮ್ಮನ್ನು ಎಂದಿಗೂ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಿಮ್ಮ ಪ್ರಯಾಣವು ತುಂಬಾ ದೊಡ್ಡದಾಗಿದೆ ಮತ್ತು ನಿಮ್ಮ ಸಾಮರ್ಥ್ಯಗಳು ಅಂಕಪಟ್ಟಿಯನ್ನು ಮೀರಿವೆ. ಆತ್ಮವಿಶ್ವಾಸದಿಂದಿರಿ, ಕುತೂಹಲದಿಂದಿರಿ ಏಕೆಂದರೆ ದೊಡ್ಡ ವಿಷಯಗಳು ಕಾಯುತ್ತಿವೆ. #ExamWarriors" ಎಂಬ ಹ್ಯಾಷ್​ಟ್ಯಾಗ್ ನೊಂದಿಗೆ ತನ್ನ ಎಕ್ಸ್ ಅಕೌಂಟ್ ನಲ್ಲಿ ಈ ಸಂದೇಶವನ್ನು ಹಾಕಿದ್ದಾರೆ.

 

ವಿದ್ಯಾರ್ಥಿಗಳು ತಮ್ಮ ಅಂಕಗಳಿಂದ ನಿರಾಶೆಯಾಗದೆ ಆತ್ಮವಿಶ್ವಾಸದಿಂದ ಇರಲು ತಿಳಿಸಿದ್ದಾರೆ. ನಿಮ್ಮ ಸಾಮರ್ಥ್ಯವನ್ನು ಒಂದು ಪರೀಕ್ಷೆ ವ್ಯಾಖ್ಯಾನಿಸಲು ಸಾಧ್ಯವಿಲ್ಲ, ದೊಡ್ಡ ವಿಷಯಗಳು ನಿಮ್ಮನ್ನು ಕಾಯುತ್ತಿದೆ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಯೋಚಿಸಬೇಕು ಯಾಕೆಂದರೆ ದೊಡ್ಡ ವಿಷಯಗಳು ಭವಿಷ್ಯದಲ್ಲಿ ಬರಲಿದೆ ಎಂಬ ಸಂದೇಶ ವಿದ್ಯಾರ್ಥಿಗಳ ಆತ್ಮಸ್ಥರ್ಯ ಹೆಚ್ಚು ಮಾಡಲಿದೆ.

 

'ಮಾನ್ಯ ಪ್ರಧಾನ ಮಂತ್ರಿ @narendramodi ಅವರೇ, ಈ ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದಗಳು. ನಿಜಕ್ಕೂ, ಒಂದೇ ಪರೀಕ್ಷೆ ನಮ್ಮ ಭವಿಷ್ಯವನ್ನು ವ್ಯಾಖ್ಯಾನಿಸುವುದಿಲ್ಲ. ನಿಮ್ಮ ಸಂದೇಶವು ನಮ್ಮನ್ನು ನಾವು ನಂಬುವಂತೆ ಮತ್ತು ಧೈರ್ಯ ಮತ್ತು ಕುತೂಹಲದಿಂದ ಮುಂದುವರಿಯಲು ಪ್ರೇರೇಪಿಸುತ್ತದೆ. ನಿಮ್ಮ ಮಾರ್ಗದರ್ಶನಕ್ಕೆ ಕೃತಜ್ಞತೆಗಳು' ಎಂದು ಕೆಲವರು ಮೋದಿಯ ಪ್ರೋತ್ಸಾಹದ ಮಾತುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

 

@Grok ಎನ್ನುವ ಎಕ್ಸ್ ಅಕೌಂಟ್ ನಿಂದ 'ಒಂದೇ ಪರೀಕ್ಷಾ ಫಲಿತಾಂಶ ಪತ್ರಿಕೆಯು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ, ಆದರೆ ಅದು ಅದರ ಮೇಲೆ ಪ್ರಭಾವ ಬೀರಬಹುದು. ಉತ್ತಮ ಅಂಕಗಳು ಹೆಚ್ಚಾಗಿ ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಿಗೆ ಬಾಗಿಲು ತೆರೆಯುತ್ತವೆ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಯಶಸ್ಸು ಕೇವಲ ಪರೀಕ್ಷೆಗಳ ಬಗ್ಗೆ ಅಲ್ಲ - ಸೃಜನಶೀಲತೆ, ಸ್ಥಿತಿಸ್ಥಾಪಕತ್ವ ಮತ್ತು ತಂಡದ ಕೆಲಸದಂತಹ ಕೌಶಲ್ಯಗಳು ಸಹ ಮುಖ್ಯ. ಸ್ಟೀವ್ ಜಾಬ್ಸ್‌ನಂತಹ ಅನೇಕರು ಉನ್ನತ ಅಂಕಗಳಿಲ್ಲದೆ ಅಭಿವೃದ್ಧಿ ಹೊಂದಿದರು. ವೃತ್ತಿಪರ ತರಬೇತಿಯಂತಹ ಪರ್ಯಾಯ ಮಾರ್ಗಗಳು ಸಹ ಯಶಸ್ಸಿಗೆ ಕಾರಣವಾಗುತ್ತವೆ. ಉಜ್ವಲ ಭವಿಷ್ಯಕ್ಕಾಗಿ ಬೆಳವಣಿಗೆ ಮತ್ತು ವೈವಿಧ್ಯಮಯ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿ' ಎಂದು ಬಹಳ ಸುಂದರವಾಗಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಪ್ರೋತ್ಸಾವಿಸುವ ಪದಗಳನ್ನು ಬರೆದು ಮೋದಿಯವರ ಟ್ವೀಟ್ ಗೆ ಉತ್ತರ ನೀಡಿ ಬರೆದಿದ್ದಾರೆ.