ಕಲ್ಲಡ್ಕ: ಕಲ್ಲಡ್ಕದ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ವತಿಯಿಂದ ಆಯೋಜಿಸಲಾಗಿದ್ದ 49ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಅಕ್ಟೋಬರ್ 20ರಂದು ಶ್ರೀ ಶಾರದಾ ದೇವಿಯ ವಿಸರ್ಜನಾ ಮಹೋತ್ಸವದೊಂದಿಗೆ ಭಕ್ತಿಭಾವದಿಂದ ಸಂಪನ್ನಗೊಂಡಿತು.
ಅಕ್ಟೋಬರ್ 17ರಂದು ಆರಂಭಗೊಂಡ ನಾಲ್ಕು ದಿನಗಳ ಶಾರದೋತ್ಸವವು ಕಲ್ಲಡ್ಕದಲ್ಲಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾಯಿತು. ಮಹೋತ್ಸವದ ಅಂಗವಾಗಿ ನಡೆದ ಶ್ರೀ ಶಾರದಾ ದೇವಿಯ ಆರಾಧನೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದು, ಕಲ್ಲಡ್ಕ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಅಕ್ಟೋಬರ್ 20ರ ಸಂಜೆ ನಡೆದ ಶ್ರೀ ಶಾರದಾ ದೇವಿಯ ವಿಸರ್ಜನಾ ಕಾರ್ಯಕ್ರಮದೊಂದಿಗೆ ನಾಲ್ಕು ದಿನಗಳ ಧಾರ್ಮಿಕ ಮಹೋತ್ಸವಕ್ಕೆ ಮಂಗಳ ಹಾಡಲಾಯಿತು. ಇದರೊಂದಿಗೆ ಕಲ್ಲಡ್ಕದ 49ನೇ ವರ್ಷದ ಶಾರದೋತ್ಸವವು ಯಶಸ್ವಿಯಾಗಿ ತೆರೆಕಂಡಿತು.





